Friday, April 23, 2010

dinakkondu Animuttu


೧)ಇಳೆಯಿ೦ದ ಮೊಳಕೆಯೊಡೆವ೦ದು ತಮಟೆಗಳಿಲ್ಲ
ಫಲಮಾಗುವ೦ದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚ೦ದ್ರರದೊ೦ದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮ೦ಕುತಿಮ್ಮ||

೨)ಒಳ್ಳೆಯ ಜನರ ಸಹವಾಸವೆ೦ದರೆ ಅತ್ತರ್ ಅ೦ಗಡಿಗೆ ಹೋಗಿ ಬ೦ದ೦ತೆ.ನೀವು ಅತ್ತರನ್ನು ಖರೀದಿಸಿ ಅಥವಾ ಬಿಡಿ, ನಿಮ್ಮಿ೦ದ ಸುವಾಸನೆ ಸೂಸುತ್ತಿರುತ್ತದೆ.ನಿಮ್ಮ ಸಹವಾಸವೂ ಬೇರೆಯವರಿಗೆ ಇಷ್ಟವಾಗುತ್ತದೆ.ಅ೦ದರೆ ನೀವಷ್ಟೇ ಅಲ್ಲ ನಿಮ್ಮ ಸುತ್ತಮುತ್ತ ಯಾರಿದ್ದಾರೆ೦ಬುದೂಮುಖ್ಯ,

2 comments:

  1. ಕಗ್ಗದಿಂದ ಆಯ್ದ ಪದ್ಯಕ್ಕಾಗಿ ಬಹಳ ಧನ್ಯವಾದಗಳು. ಡಿವಿಜಿರವರು ತಾವು ಹೇಳಿದ್ದನ್ನು ಮಾಡಿ ತೋರಿಸಿದಂತಹ ವ್ಯಕ್ತಿ. ತಮ್ಮ ಸಾಧನೆಯನ್ನು ಎಂದಿಗೂ ಹೇಳಿಕೊಳ್ಳದಂತಹ ಅಪರೂಪದ ವ್ಯಕ್ತಿ. ಕನ್ನಡ ಸಾರಸ್ವತ ಲೋಕ ಕಂಡ ಮಹಾನ್ ದಾರ್ಶನಿಕ. "ವನಸುಮ"ದಂತೆ ಬಾಳಿ ತೋರಿಸಿದ ವ್ಯಕ್ತಿ. ಕಗ್ಗದ ಈ ಪದ್ಯ ಅವರ ಜೀವನ ದರ್ಶನಕ್ಕೆ ಹಿಡಿದ ಕನ್ನಡಿ. ಇಂತಹ ಒಳ್ಳೆಯ ಆಣಿಮುತ್ತಿಗಾಗಿ ಧನ್ಯವಾದಗಳು.

    ರವಿ

    ReplyDelete
  2. thanks for the opinion. do u know though he had not studied much more he got dctr. award with many more awrds. even college student also got his poems for the exam

    ReplyDelete

Note: Only a member of this blog may post a comment.