Thursday, April 8, 2010

dinakkondu Animuttu

).ಬಹುತೇಕ ಸ೦ದರ್ಭದಲ್ಲಿ ಮು೦ಬರುವ ನೋವನ್ನು ಸ೦ದಿಗ್ಧವನ್ನು ನಿರೀಕ್ಷಿಸಬಲ್ಲವರಾಗಿರುತ್ತೇವೆ.ಹಾಗೆ ನೋಡಿದರೆ ನಮಗೆ ಅದು ಖ೦ಡಿತ ನೋವು ಕೊಡುತ್ತದೆ ಎ೦ಬುದು ಖಚಿತವಾಗಿರುತ್ತದೆ.ಆದರೂ ಸಹ ಯಾವುದೋ ಹಠಕ್ಕೆ ಬಿದ್ದು ಅ೦ಥ ಸ೦ದರ್ಭವನ್ನು ತ೦ದುಕೊಳ್ಳುತ್ತೇವೆ. ಕೊನೆಗೊಮ್ಮೆ ಅದರ ಫಲ ದೊರೆತಾಗ ನೋಯುತ್ತೇವೆ.ಅದರಿ೦ದ ಸಾಧಿಸುವುದೇನೂ ಇಲ್ಲ.ಸ೦ದರ್ಭಕ್ಕಾಗಿ ಮು೦ದಿನ ಸಮಸ್ಯೆಯನ್ನು ತಪ್ಪಿಸುವುದಕ್ಕಾಗಿ ಇಡೀ ಜೀವನದಲ್ಲಿ ಎದುರಾಗಬಹುದಾದ ಕೊರಗನ್ನು ಇಲ್ಲವಾಗಿಸಿಕೊಳ್ಳುವುದಕ್ಕಾಗಿ ಪುಟ್ಟದೊ೦ದು ಸುಳ್ಳು ಹೇಳಿ ಬಚಾವಾಗುವುದು ಅಥವಾ ಅದು ನ್ಯಾಯವೋ ಅನ್ಯಾಯವೋ ಆ ಕ್ಷಣದಿ೦ದ ತಪ್ಪಿಸಿಕೊಳ್ಳುವುದು ನಿಜವಾಗಿಯೂ ವಿಹಿತ. ಆತ್ಮಧರ್ಮ ಎನ್ನುವುದು ಇದನ್ನೇ.ನಾವು ಸತ್ಯಸ೦ಧರು, ಪ್ರಾಮಣಿಕರು ಎ೦ಬ ಹಮ್ಮಿನೊ೦ದಿಗೆ ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆಯನ್ನು ತ೦ದುಕೊಳ್ಳುವುದಕ್ಕಿ೦ತ ಆತ್ಮಸುಖಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಯುಕ್ತ. ಅದರಿ೦ದ ಯಾವ ಪ್ರಪ೦ಚವೂ ಮುಳುಗಿಹೋಗುವುದಿಲ್ಲ.ಒ೦ದೇ ಮಾತಿನಲ್ಲಿ ಹೇಳುವುದಾದರೆ ಈ ಜಗತ್ತಿನಲ್ಲಿ ಇನ್ನೊ೦ದು ಜೀವಿಗೆ ಅನ್ಯಾಯವಾಗದಿದ್ದರೆ, ಇನ್ನೊ೦ದು ವ್ಯಕ್ತಿಗೆ ನೋವು ತರದಿದ್ದರೆ ನಮ್ಮ ಯಾವುದೇ ನಡೆಯೋ ಅನ್ಯಾಯ-ಅಧರ್ಮ ಎನ್ನಿಸಿಕೊಳ್ಳುವುದಿಲ್ಲ, ಬದಲಾಗಿ ನಮ್ಮ ಆತ್ಮವನ್ನು ನೋಯಿಸಿಕೊಳ್ಳುವುದೇ ಹೆಚ್ಚು ಅನ್ಯಾಯವೆನ್ನಿಸಿಕೊಳ್ಳುತ್ತದೆ

3 comments:

  1. ಆತ್ಮವಿಮರ್ಶೆಗೆಂದು ಹಾಗೂ ಆತ್ಮಾವಲೋಕನಕ್ಕಾಗಿ ಪ್ರತಿದಿನವೂ ಸ್ವಲ್ಪ ಸಮಯ ವ್ಯಯಿಸಿದರೆ, ಈ ರೀತಿಯ ಸಮಸ್ಯೆಗಳು ಬಹುತೇಕ ನಿವಾರಣೆಯಾಗುತ್ತದೆಂದು ನನ್ನ ಅಭಿಪ್ರಾಯ.

    ರವಿ

    ReplyDelete

Note: Only a member of this blog may post a comment.