೨೦)ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ,ಕೆಟ್ಟಕೆಲಸ ಮಾಡಬೇಡಿ.ಆದರೆ ಒಳ್ಳೆಯ ಕೆಲಸ ಮಾಡುವವರಿಗೆ ಪ್ರೇರಣೆ ಕೊಡಿ.
೨೧)ಯಶಸ್ಸೆ೦ದರೆ ಅದು ಇ೦ದಿನ ಸಾಧ್ನೆಯಲ್ಲ. ಅದು ಅನುದಿನದ ಸಾಧನೆ. ನಾಳೆಯೂ ಯಶಸ್ಸುಗಳಿಸಬೇಕೆ೦ದರೆ ನಾಳೆಯೂ ಸಾಧನೆ
ಮಾಡಬೇಕು.ಆಗಲೇ ನೀವು ಸದಾ ಯಶ್ಸ್ವಿಯಾಗುವಿರಿ.
೨೨)ನಿಮಗೆ ಸಮಾಧಾನ ಬೇಕೆ೦ದರೆ ಬೇರೆಯವರ ತಪ್ಪುಗಳನ್ನು ತೋರಿಸುತ್ತಾ ಹೋಗಬೇಡಿ.ನಿಮಗೆ ಶಾ೦ತಿ ಬೇಕೆ೦ದಿದ್ದರೆ ಬೇರೆಯವರನ್ನು ದ್ವೇಷಿಸಬೇಡಿ. ನಿಮ್ಮನ್ನು ಎಲ್ಲರೂ ಇಷ್ಟಪಡಬೇಕೆ೦ದಿದ್ದರೆ ಯಾರನ್ನೂ ನೋಯಿಸಬೇಡಿ.
೨೩)ಅನ್ಯರು ದುಃಖ ಹೇಳಿಕೊ೦ಡಾಗ ನೀವೂ ಅತ್ತು ಅವ್ರನ್ನು ಅಳಿಸಬೇಡಿ.
೨೪)ನಮಗಿ೦ತ ಮೇಲಿನವರೊಡನೆ ಹೋಲಿಸಿಕೊ೦ಡು ಕೀಳರಿಮೆ ಪಡುವ ಬದಲು ನಮಗಿ೦ತ ಕೆಳಗಿನವರೊಡನೆ ಹೋಲಿಸಿಕೊ೦ಡು ಹೆಮ್ಮೆಪಡಿ.
ಚಿಕ್ಕಮ್ಮ,
ReplyDeleteನಿಮ್ಮ ದಿನಕ್ಕೊಂದು ಆಣಿಮುತ್ತು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ನಿಮ್ಮ ಆಣಿಮುತ್ತುಗಳು ನಮ್ಮ ಸದಸ್ಯರೆಲ್ಲರಿಗೂ ಸಹ ಬಹಳ ಉಪಯುಕ್ತವೆಂದು ನನ್ನ ಸ್ವಂತ ಅನಿಸಿಕೆ. ನಮ್ಮ ಬ್ಲಾಗಿನಲ್ಲಿ, ನಿಮ್ಮ ಆಣಿಮುತ್ತುಗಳು ಹೀಗೇ ಸುರಿಯುತ್ತಿರಲಿ.
ರವಿ
ಓಹೋ ರವಿ,
ReplyDeleteನೀನು ನೀಡಿರುವ ಅಭಿಪ್ರಾಯ ಹಾಗೂ ಉತ್ತೇಜನಗಳಿ೦ದ ನಿಜಕ್ಕೂ ನನಗೆ ಬಹಳ ಉತ್ಸಾಹ ಹಾಗೂ ಸ೦ತೋಷಗಳು ಮೋಡಿವೆ. ಹೀಗೆಯೇ ಆಗಾಗ ವಿಮರ್ಶೆಗಳು ಮೂಡಿ ಬರಲಿ.