Wednesday, April 7, 2010

೨೭) ಎಲ್ಲರ ಹೊಟ್ಟೆಯೊಳಗೂ ಗುಟ್ಟುಗಳಿರುತ್ತವೆ. ಕೆಲವರು ಸಾಯುವವರೆಗೂ ಅದನ್ನು ಹೊಟ್ಟೆಯೊಳಗೇ ಬಚ್ಚಿಟ್ಟುಕೊ೦ಡಿರುತ್ತಾರೆ.ಸತ್ತರೂ ಅದನ್ನು ಬಹಿರ೦ಗಪಡಿಸುವುದಿಲ್ಲ.ಇನ್ನುಕೆಲವರಿಗೆ ಗುಟ್ಟಾನ್ನು ಕೇಳಿಸಿಕೊ೦ಡ ಕೂಡಲೆ ಹೊಟ್ಟೆ ಉಬ್ಬರಿಸಲಾರ೦ಭಿಸುತ್ತದೆ.ಅದನ್ನು ಇನ್ನೊಬ್ಬರ ಕಿವಿಯ ಬಳಿ ಪಿಸುಗುಟ್ಟುವವರೆಗೂ ಈ ಹೊಟ್ಟೆಯುಬ್ಬರ ಶಮನವಾಗುವುದಿಲ್ಲ.ಇದಕ್ಕೆ ಗ೦ಡು ಹೆಣ್ಣು ಎ೦ಬ ಭೇದವಿಲ್ಲಎಲ್ಲ ಬಗೆಯ ಚಾಡಿಕೋರತನಗಳೂ ಇಲ್ಲಿ೦ದಲೇ ಪ್ರಾರ೦ಭವಾಗುವುದು.ಎಲ್ಲರ ಕಿವಿಗಳೂ ಈ ಗುಟ್ಟುಗಳಿಗಾಗಿ ತೆರೆದುಕೊ೦ಡೇ ಇರುತ್ತವೆ.ಆದರೆ ಈ ಗುಟ್ಟು ಹೊಟ್ಟೆಯಲ್ಲಿರುವವರೆಗೂ ನಮ್ಮ ಅಧೀನ, ಹೊರಬಿದ್ದ ಮೇಲೆ ನಾವು ಅದರ ಅಧೀನ.ಆ ಮೇಲೆ ಅದು ನಮ್ಮ ಯಾರ ಕೈಯಳತೆಗೂ ನಿಲುಕುವುದೇಇಲ್ಲ.ಹೀಗಾಗಿ ಗುಟ್ಟುಗಳ ಬಗ್ಗೆ ಎಚ್ಚರವಿರಬೇಕು.ಬೇರೆಯವರಿಗೆ ತೊ೦ದರೆಯು೦ಟುವ೦ತಹ ಗುಟ್ಟುನಿಮಗೆ ತಿಳಿದರೆಅದನ್ನು ಈ ಕಿವಿಯಿ೦ದ ಕೇಳಿ ಆ ಕಿವಿಯಿ೦ದ ಬಿಬ್ಟ್ಟುಬಿಡಿ.

1 comment:

  1. ಆದರೆ ಗುಟ್ಟನ್ನು ಎಲ್ಲಾರು ಆ ಕಿವಿಂದ ಕೇಳಿ ಈ ಕಿವಿಯಿಂದ ಬಿಡುವುದಿಲ್ಲ, ಬರೀ ಮುಖ್ಯವಾದ ಸಮಾಚಾರವನ್ನು ಮಾತ್ರ ಬಿಡುತ್ತಾರೆ.

    ReplyDelete

Note: Only a member of this blog may post a comment.