೧೯)ಶ್ರೀಮ೦ತರಿರಲಿ ಅಥವಾ ಬಡವರಿರಲಿ ಸಮಸ್ಯೆಯಿಲ್ಲದವರಿಲ್ಲ. ಹಸಿವಾದರೆ ಏನು ತಿನ್ನಲಿ ಎ೦ಬುದು ಬಡವನ ಸಮಸ್ಯೆಯಾದರೆ ಹಸಿವಾಗಲು ಏನು ತಿನ್ನಬೇಕು ಎ೦ಬುದು ಶ್ರೀಮ೦ತನ ಸಮಸ್ಯ್ಸೆ.ಏನು ಮಾಡುವುದು ಸಮಯವೇ ಸಿಗುವುದಿಲ್ಲ ಎ೦ಬುದು ಯುವಕನ ಸಮಸ್ಯೆಯಾದರೆ ಸಮಯವೇ ಕಳೆಯುತ್ತಿಲ್ಲ- ಎ೦ಬುದು ಮುದುಕನ ಸಮಸ್ಯೆ.ಕಡ್ಡಿಯನ್ನು ಗುಡ್ಡ ಮಾಡಿಕೊ೦ಡರು ಎ೦ಬ೦ತಾಗದೆ "ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬಳಸಿದರು" ಎ೦ಬ೦ತೆ ವಿಶೇಷವಾಗಿ ಶ್ರಮ ವಹಿಸದೆ ಉಪಾಯವಾಗಿ ಜಾಣ್ತನದಿ೦ದ ಸಮಸ್ಯೆಗಳನ್ನೆದುರಿಸಿ ಬಾಳಿನ ಸವಿಯನ್ನು ಅನುಭವಿಸುವವನೇ ಜಾಣ.
No comments:
Post a Comment
Note: Only a member of this blog may post a comment.