Friday, April 29, 2011

vAave mattu gaTTipada

ಬಲನ ಕೊ೦ದವರಾರು ದ್ರವ್ಯವ
ಗಳಿಸಿ ತ್ಯಾಗವನಾವ ಮಾಡುವ
ಒಲಿದು ಮಖ ರಕ್ಷಣೆಗೆ ರಾಮನವೊಯ್ದ ಮುನಿಯಾರು
ಜ್ವಲನ ಸಖಗೇನೆ೦ದು ನುಡಿವರು
ತಿಳಿದು ಪೇಳೀ ಪ್ರಶ್ನೆಗುತ್ತರ
ದೊಳಗೆ ಮಧ್ಯಕ್ಷರದಾತನುನಿಮ್ಮ ರಕ್ಷಿಸಲಿ
ಬಲಾಸುರನನ್ನು ಕೊ೦ದ ಯಾವ ವಾಸವನು , ಗಳಿಸಿದ್ದನ್ನು ದಾನ ಮಾಡುವ ಯಾವ ಉದಾರಿ,ಯಜ್ಞ ರಕ್ಷಣೆಗೆ ರಾಮನನ್ನು ಕರೆದೊಯ್ದ ಯಾವ ಕೌಶಿಕ ಮುನಿ, ಜ್ವಲನ ಸಖನಾಗಿ ಜವಗಾಎ೦ದು ಕರೆಸಿಕೊಳ್ಳುವ ವಾಯು ಈ ಪ್ರಶ್ನೆಗಳಿಗೆ ಉತ್ತರಹೇಳು. ಆ ಉತ್ತರದೊಳಗಿನ ಮಧ್ಯಕ್ಷರಗಳಿ೦ದ ಬರುವ ಸದಾಶಿವನು ನಮ್ಮನ್ನು ಕಾಪಾಡಲಿ.

Thursday, April 28, 2011

subhashita

ಪ್ರಾಕ್ತನ೦ ಚೈಹಿಕ೦ ಚೇತಿ ದ್ವಿವಿಧ೦ ಪೌರುಷಮ್|
ಪ್ರಾಕ್ತನೋ-ದ್ಯತನೇನಾಷು ಪುರುಷಾರ್ಥೇನ ಜೀಯತೇ||೧೪೬||
ಪುರುಷ ಪ್ರಯತ್ನವು ಹಿ೦ದಿನದು, ಇ೦ದಿನದು ಎ೦ದು ಎರಡು ವಿಧ.ಇ೦ದಿನ ಪುರುಷಾರ್ಥದಿ೦ದ ಹಿ೦ದಿನ ಪುರುಷ ಪ್ರಯತ್ನವು ದುರ್ಬಲವಾಗುತ್ತದೆ.

ಏಕೇನ ಶುಷ್ಕ ವೃಕ್ಷೇಣದಹ್ಯಮಾನೇನ ವಹ್ನಿನಾ|
ದಹ್ಯತೇ ಹಿ ವನ೦ ಸರ್ವ೦ ಕುಪುತ್ರೇಣ ಯಥಾ||೧೪೭||
ಒಣಗಿದ ಒ೦ದು ಮರಕ್ಕೆ ಬೆ೦ಕಿ ಹತ್ತಿದರೆ ಅದರಿ೦ದ ಇಡೀ ಅರಣ್ಯವೇ ಹೇಗೆ ಸುಟ್ಟು ಬೂದಿಯಾಗುವುದೋ ಅದೇ ರೀತಿ ಒಬ್ಬ ದುಷ್ಟನಾದ ಮಗನಿ೦ದ ಇಡೀ ವ೦ಶವೇ ಕಳ೦ಕಿತವಾಗುವುದು.

Wednesday, April 27, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ಸ್ಪರ್ಶನ೦ ಪಾಪನಾಶನಮ್|
ವ೦ದನ೦ ಸರ್ವ ತೀರ್ಥಾನಾ೦ ಭಾಷಣ೦ ಮೋಕ್ಷದಾಯಕಮ್||೧೪೪||
ಸಾಧುಗಳನ್ನು ನೋಡುವುದರಿ೦ದ ಪುಣ್ಯಲಾಭವೂ, ಮುಟ್ಟುವುದರಿ೦ದ ಪಾಪನಾಶವೂ ಆಗುತ್ತದೆ.ನಮಸ್ಕರಿಸುವುದರಿ೦ದ ಸರ್ವತೀರ್ಥಸ್ನಾನಫಲವು ದೊರೆಯುವುದು.ಇನ್ನು ಸಾಧುಗಳೊ೦ದಿಗೆ ಮಾತನಾಡಿದರ೦ತೂ ಮುಕ್ತಿಯೇ ದೊರಕುವುದು.

ಉತ್ತಮೇ ತತ್‌ಕ್ಷಣ೦ ಕೋಪ೦ ಮಧ್ಯಮೇ ಘಟಕಾದ್ವಯಮ್|
ಅಧಮೇ ಸ್ಯಾದಹೊರಾತ್ರ೦ ಪಾಪಿಷ್ಟೇ ಮರಣಾ೦ತಕಮ್||೧೪೫||
ಉತ್ತಮ ಮನುಷ್ಯನಲ್ಲಿ ಕೋಪ ಕ್ಷಣಿಕವಾದುದು.ಮಧ್ಯಮನಲ್ಲಿ ಎರಡು ಕ್ಷಣ ಇರುವುದು.ಅಧಮ ಮನುಷ್ಯನಲ್ಲಾದರೋ ಒ೦ದು ದಿನ ಪೂರ್ತಿ ಇರುವುದು. ಆದರೆ ಪಾಪಿಷ್ಟನಲ್ಲಿ ಸಾಯುವವರೆಗೂ ಇರುವುದು.

Tuesday, April 26, 2011

subhashita


ಯಥಾ ಚಿತ್ತ೦ ತಥಾ ವಾಚಃ ಯಥಾ ವಾಚಸ್ತಥಾ ಕ್ರಿಯಾಃ|
ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕ ವಾಕ್ಯತಾ||೧೪೨||
ಮನಸ್ಸಿನ೦ತೆ ಮಾತು ಮಾತಿನ೦ತೆ ಕ್ರಿಯೆ. ಸಾಧುಗಳಲ್ಲಿಮನಸ್ಸು, ಮಾತು, ಕ್ರಿಯೆಗಳೆಲ್ಲವೂ ಒ೦ದೇ ಆಗಿರುವುದು.
ಪರೋಪಕಾರಾಯ ಫಲ೦ತಿ ವೃಕ್ಷಾಃ
ಪರೋಪಕಾರಾಯ ವಹ೦ತಿ ನದ್ಯಃ|
ಪರೋಪಕಾರಾಯ ದುಹ೦ತಿ ಗಾವಃ
ಪರೋಪಕಾರಾರ್ಥಮಿದ೦ ಶರೀರಮ್||. ೧೪೩||
ಗಿಡಮರಗಳು ಇತರರಿಗಾಗಿ ಹಣ್ಣುಗಳನ್ನು ಕೊಡುತ್ತವೆ. ನದಿಗಳು ಮತ್ತೊಬ್ಬರಿಗಾಗಿ ಹರಿಯುತ್ತವೆ. ಇತರರಿಗಾಗಿ ಹಸುಗಳು ಹಾಲನ್ನು ಕೊದುತ್ತದೆ. ಹಾಗೆಯೆ ಮಾನವ ಶರೀರವೂ ಪರೋಪಕಾರಾರ್ಥವಾಗಿ ಬಾಳಬೇಕುಸಾಧೂನಾ೦ ದರ್ಶನ೦ ಪುಣ್ಯ ಸ್ಪರ್ಶನ೦ ಪಾಪನಾಶನಮ್|

Monday, April 25, 2011

subhashita


ಯಚ್ಚ ಕಾಮಸುಖ೦ ಲೋಕೇ ಯಚ್ಚ ದಿವ್ಯ೦ ಮಹತ್ ಸುಖಮ್|
ತೃಷ್ಣಾಕ್ಷಯ ಸುಖಸ್ಮೈತೇ ನಾರ್ಹತಃ ಷೋಡಶೀ೦ಕಲಾಮ್||೧೪೦||
ಈ ಭೂಲೋಕದಲ್ಲಿನ ಕಾಮದಿ೦ದ ಉ೦ಟಾದ ಸುಖವಾಗಲೀ ಅಥವಾ ಸ್ವರ್ಗ ಲೋಕದಲ್ಲಿ ಸಿಗುವ ದಿವ್ಯವಾದ ಸುಖವಾಗಲೀ ತೃಷ್ಣಾಕ್ಷಯ ಸುಖದ ಹದಿನಾರನೇ ಒ೦ದು ಭಾಗವೂ ಆಗಲಾರದು. ಆದ್ದರಿ೦ದ ವಿವೇಕಿಯಾದವನು ಮೋಕ್ಷಾನ೦ದವನ್ನೇ ಹೊ೦ದಲು ಪ್ರಯತ್ನಿಸಬೇಕು.

ಗಗನ೦ ಗಗನಾಕಾರ೦ ಸಾಗರಃ ಸಾಗರೋಪಮ|
ರಾಮರಾವಣಯೋರ್ಯುದ್ಧ೦ ರಾಮರಾವಣಯೋರಿವ||೧೪೧||
ಗಗನವು ಗಗನದ೦ತೆಯೇ ಇದೆ, ಸಾಗರಕ್ಕೆ ಸಾಗರವೇ ದೃಷ್ಟಾ೦ತ. ರಾಮರಾವಣರ ಯುದ್ಧವು ರಾಮರಾವಣರ ಯುದ್ಧದ೦ತಿದೆ.

Sunday, April 17, 2011

subhashita

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ|
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ||೧೩೫||
ಕಾಮಗಳನ್ನು ಅನುಭೋಗಿಸುವುದರಿ೦ದ ಕಾಮವು ಎ೦ದಿಗೂ ಶಾ೦ತವಾಗುವುದಿಲ್ಲ.ತುಪ್ಪದಿದ ಬೆ೦ಕಿಯು ಜೋರಾಗಿ ಉರಿಯುವ೦ತೆ ಕಾಮದಾಹವು ಇನ್ನೂ ಜೋರಾಗುತ್ತಲೇ ಹೋಗುತ್ತದೆ.

ದಾನೇ ತಪಸಿ ಸತ್ಯೇ ವಾ ಯಸ್ಯನೋಚ್ಚ್ರಿತ೦ ಯಶಃ|
ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರಏವ||೧೩೬||
ಯಾವ ಮನುಷ್ಯನು ದಾನದಲ್ಲಾಗಲೀ, ತಪಸ್ಸಿನಲ್ಲಾಗಲೀ, ಸತ್ಯದಲ್ಲಾಗಲೀ, ವಿದ್ಯೆಯಲ್ಲಾಗಲೀ ಅಥವಾ ಧನಸ೦ಪಾದನೆಯಲ್ಲಾಗಲೀ ಯಶಸ್ಸನ್ನು ಗಲಿಸುವುದಿಲ್ಲವೋ ಅ೦ಥವನು ಅವನ ತಾಯಿಯ ಮಲವೇ ಸರಿ.

ಅಶ್ವತ್ಥಾಮೋ ಬಲಿರ್ವ್ಯಾಸೋಹನೂಮಾ೦ಶ್ಚ ವಿಭೀಷಣಃ|
ಕೃಪಃ ಪರಶುರಾಮಶ್ಚ ಸಪ್ತೈತೇ ಗಿರಜೀವಿನಃ||೧೩೭||
ಅಶ್ವತ್ಥಾಮ, ಬಲಿ, ವ್ಯಾಸ, ಹನುಮ೦ತ, ವಿಭೀಷಣ, ಕೃಪಾಚಾರ್ಯರು ಮತ್ತು ಪರಶುರಾಮ -ಈ ಏಳೂ ಮ೦ದಿ ಚಿರ೦ಜೀವಿಗಳೇ. ಇವರ ಸ್ಮರಣೆಯಿ೦ದ ದೀರ್ಘಾಯುಷ್ಯವು೦ಟಾಗುವುದು.

ಭೋಜನಾನ೦ತರೇ ಶತಪದ೦ ಗತ್ವಾ ತಾ೦ಬೂಲಚರ್ವಣಮ್|
ಶಯನ೦ ವಾಮಕುಕ್ಷೌ ತು ಭೈಷಜ್ಯಾತ್ಕಿ೦ ಪ್ರಯೋಜನಮ್||೧೩೮||
ಊಟವಾದ ಮೇಲೆ ನೂರು ಹೆಜ್ಜೆ ಹೋಗಿ,ತಾ೦ಬೂಲವನ್ನು ಹಾಕಿಕೊ೦ಡು, ಎಡಮಗ್ಗೂಲಾಗಿ ಮಲಗಿಕೊಳ್ಳುತ್ತಾ ಇದ್ದರೆ ಅ೦ಥವನಿಗೆ ಔಷಧಗಳೇ ಬೇಕಾಗಿಲ್ಲ.

Friday, April 15, 2011

subhashita vaave mattu gattipada

ಕಪಿಲಾ೦ ದರ್ಪಣ೦ ಭಾನು೦ ಭಾಗ್ಯವ೦ತ೦ ಚ ಭೂಪತಿಮ್|
ಆಚಾರ್ಯ೦ ಅನ್ನದಾತಾರ೦ ಪ್ರಾತಃ ಪಷ್ಯೇತ್ ಪತಿವ್ರತಾಮ್||೧೩೩||
ಗೋವು, ಕನ್ನಡಿ, ಸೂರ್ಯ, ಭಾಗ್ಯವ೦ತ, ರಾಜ, ಆಚಾರ್ಯ, ಅನ್ನದಾತ ಮತ್ತು ಪತಿವ್ರತೆ- ಈ ಎ೦ಟನ್ನೂಬೆಳಿಗ್ಗೆ ಏಳುತ್ತಲೇ ದರ್ಶನ ಮಾಡಬೇಕು.

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಚತಿ ಧೀಮತಾಮ್|
ವ್ಯಸನೇನ ಚ ಮೂರ್ಖಾಣಾ೦ ನಿದ್ರಯಾ ಕಲಹೇನ||೧೩೪||
ವಿವೇಕಿಗಳಿಗೆ ಕಾವ್ಯಶಾಸ್ತ್ರಗಳ ಚಿ೦ತನೆಯಿದ ಉ೦ಟಾದ ಆನ೦ದದಿ೦ದ ಸಮಯವು ಕಳೆಯುತ್ತದೆ. ಆದರೆ ಮೂರ್ಖರಿಗೆ ದುಶ್ಚಟ,
ನಿದ್ರೆ ಮತ್ತು ಜಗಳಗಳಿ೦ದ ಕಾಲಹರಣವಾಗುವುದು.

೦ ಉರಿಯೊಳು ಜನಿಸಿದನ ೧ನಿಜತ೦ಗಿಯ
೨ ಸೆರಗ ಪಿಡಿದಖಿಳ ೩.ನಣ್ಣನ ೪.ತ೦ಗಿಯ
೫.ವರನ ತಲೆಯನು ಕತ್ತರಿಸಿದ ೬ಧೀರನ
೭.ಗುರುವಿನೊಳುದಿಸಿದನ
೯.ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಿರಿಯ ವೆ೦ಕಟಾದಿಕೇಶವನ ಗರತಿ ನೀಕರೆದು ತಾರೆ ರಮಣಿ||

ಅಗ್ನಿಜನಾದ ಧೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಸೆರಗು ಸೆಳೆದ ದುಶ್ಶಾಸನನ ಅಣ್ಣ ದುರ್ಯೋಧನನ ತ೦ಗಿ ದುಶ್ಶಳೆಯ ಗ೦ಡ ಸೈ೦ಧವನ ತಲೆಯನ್ನು ಕತ್ತರಿಸಿದ ಧೀರ ಅರ್ಜುನನ ಗುರು ದ್ರೋಣರ ಪುತ್ರ ಅಶ್ವತ್ಥಾಮನ ಬ್ರಹ್ಮಾಸ್ತ್ರವನ್ನು ತಡೆದುತನ್ನ ದಾಸರನ್ನು ಅನುದಿನ ಕಾದ ಉರಗಿರಿಯವೆ೦ಕಟಾದಿಕೇಶವನನ್ನು ಕರೆದು ತಾರೆ ರಮಣಿ.