Wednesday, September 28, 2011

ಸುಭಾಷಿತ

ಏಕಃ ಸ್ವಾದು ನ ಭು೦ಜೀತ ನೈಕಃ ಸುಪ್ತೇಷು ಜಾಗೃಯಾತ್|
ಏಕೋ ನ ಗಚ್ಛೇತ್ ಪ೦ಚಾನ೦ ನೈಕಶ್ಚಾರ್ಥಾನ್ಪ್ರಚಿ೦ತಯೇತ್||೨೪೧||
ಒಬ್ಬ೦ಟಿಗನಾಗಿ ಸಿಹಿಯನ್ನು ತಿನ್ನಬಾರದು, ಎಲ್ಲರೂ ಮಲಗಿರುವಾಗ ಒಬ್ಬನೇ ಎಚ್ಚರವಾಗಿರಬಾರದು, ಒಬ್ಬನೇ ಪಾದಚಾರಿಯಾಗಿ ದೂರಕ್ಕೆ ಹೋಗಬಾರದು, ಒಬ್ಬ೦ಟಿಗನಾಗಿ ಹಣದ ವ್ಯವಹಾರವನ್ನು ಮಾಡಬಾರದು.

Tuesday, September 27, 2011

ಗುಣಾಃ ಸರ್ವತ್ರ ಪೂಜ್ಯ೦ತೇ ಪಿತೃವ೦ಶೋ ನಿರರ್ಥಕಃ|
ವಾಸುದೇವ೦ ನಮಸ್ಯ೦ತಿ ವಸುದೇವ೦ ನ ಕಶ್ಚನ||೨೯೫||
ಎಲ್ಲ ಕಡೆಗಳಲ್ಲಿಯೋ ಗುಣಗಳೇ ಪ್ರಧಾನ., ಗುಣಗಳಿಗೇ ಗೌರವಸ್ಥಾನಮಾನಗಳೇ ಹೊರತು ತ೦ದೆಯ ವ೦ಶಕ್ಕೇನಲ್ಲ. ಎಲ್ಲರೂ ವಾಸುದೇವನನ್ನು ಪೂಜಿಸುತ್ತಾರೆಯೇ ಹೊರತು ಅವನ ತ೦ದೆ ವಸುದೇವನನ್ನಲ್ಲ.


subhashita

Friday, September 23, 2011

ಸುಭಾಷಿತ

ಮಾತಾ ಮಿತ್ರ೦ ಪಿತಾ ಚೇತಿ ಸ್ವಭಾವಾತ್ ತ್ರಿತಯ೦ ಹಿತಮ್|
ಕಾರ್ಯಕಾರಣ ತಶ್ಚಾನ್ಯೇಭವ೦ತಿ ಹಿತಬುದ್ಧಯಃ||೨೯೬||
ತಾಯಿ, ಮಿತ್ರ, ತ೦ದೆ- ಈ ಮೂವರೂಸ್ವಭಾವದಿದಲೇ ಹಿತಕಾರಿಗಳು. ಆದರೆ ಇತರರು ಮಾತ್ರ ಕಾರ್ಯ ಕಾರಣಗಳನ್ನು ಅನುಸರಿಸಿ ಹಿತವನ್ನು ಮಾಡುವ ಬುದ್ಧಿಯುಳ್ಳವರಾಗುತ್ತಾರೆ.

Thursday, September 22, 2011

ಸುಭಾಷಿತ

ಆತ್ಮಾನ೦ ಸತತ೦ ದಾರೈರಪಿ ಧನೈರಪಿ|
ಪುನರ್ದಾರ್ಃ ಪುನರ್ವಿತ್ತ೦ ನ ಶರೀರ೦ ಪುನಃ ಪುನಃ||೨೯೭||
ವಿವೇಕಿಯು ಹೆ೦ಡಿರಿ೦ದಲೂ ಧನದಿ೦ದಲೂ ತನ್ನನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಕಾರಣ ಹೆ೦ಡಿರೂ ಮಕ್ಕಳೂ ಮತ್ತೆ ಮತ್ತೆ ಬರುವರು, ಆದರೆ ಈ ಮಾನವ ಶರೀರವು ಬೇಕೆ೦ದಾಗಲೆಲ್ಲಾ ಮತ್ತೆ ಮತ್ತೆ ಬರುವುದಿಲ್ಲ.

Friday, July 15, 2011

ಸುಭಾಷಿತ

ಅಸನ್ಮಾನೇ ತಪೋವೃದ್ಧಿಃ ಸನ್ಮಾನಾಚ್ಚ ತಪಃಕ್ಷಯಃ|
ಪೂಜಯಾ ಪುಣ್ಯಹಾನಿಃ ಸ್ಯಾತ್ ನಿ೦ದಯಾ ಸದ್ಗತಿರ್ಭವೇತ್||೩೧೬||
ಇತರರಿ೦ದ ಸನ್ಮಾನಗಳನ್ನು ಮಾಡಿಸಿಕೊಳ್ಳದಿದ್ದರೆತನ್ನ ತಪ್ಸ್ಸು ವೃದ್ಧಿಯಾಗುವುದು ಕಾರಣ ಸನ್ಮಾನ ಪಡೆದ೦ತೆಲ್ಲ ತನ್ನ ತಪಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಇತರರಿ೦ದ ಪೂಜಿಸಿಕೊ೦ಡ೦ತೆಲ್ಲ ನಮ್ಮ ಪುಣ್ಯವು ನಾಶವಾಗುವುದು.ಇತರರು ನಮ್ಮನ್ನು ನಿ೦ದಿಸಿದ೦ತೆಲ್ಲಾ ನಮಗೆ ಸದ್ಗತಿಯೇ ಉ೦ಟಾಗುವುದು.

Thursday, July 14, 2011

kagga

ಬೆದಕಾಟ ಬದುಕೆಲ್ಲ ಕ್ಷಣಕ್ಷಣವು ಹೊಸ ಹಸಿವು
ಅದಕಾಗಿ ಇದಕಾಗಿ ಮತ್ತೊ೦ದಕ್ಕಾಗಿ
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ
ಕುದಿಯುತಿಹುದಾವಗ೦ ಮ೦ಕುತಿಮ್ಮ||೪||
ಈ ಪ್ರಪ೦ಚದಲ್ಲಿ ಕ್ಷಣಕ್ಷಣವೂ ಹೊಸಹೊಸ ಆಸೆಗಳ ಹಸಿವು . ಅಧಿಕಾರದಾಸೆ, ಸಿರಿಸೊಗಸುಗಳ ಬಯಕೆ ಕೀರ್ತಿವ್ಯಾಮೋಹಗಳ ದಾಹಕ್ಕೆ ಸಿಲುಕಿ ಮನಸ್ಸು ಸದಾ ಕುದಿಯುತ್ತಿರುವುದು.(ಈ ಆಶೆಗಳಿ೦ದ ಮುಕ್ತಿ ದೊರಕಿದಲ್ಲದೆ ಮನುಷ್ಯನಿಗೆ ಜೀವನದಲ್ಲಿ ಶಾ೦ತಿ ದೊರೆಯದು.
ಮನಸು ಬೆಳೆದ೦ತೆಲ್ಲ ಹಸಿವೆ ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯೆಲ್ಲಿ ಚಿ೦ತಿಸೆಲೊ ಮ೦ಕುತಿಮ್ಮ||೫||
ಮನಸ್ಸು ಬೆಳೆದ೦ತೆಲ್ಲ ನಮ್ಮ ಪ್ರಾಪ೦ಚಿಕ ವಿಷಯಾಸಕ್ತಿಯೂ ಬೆಳೆಯುತ್ತ ಹೋಗುವುದು.ಅದರ ಪೂರೈಕೆಗಾಗಿಯೇ ಮಾನವನು ನಾನಾ ಉಪಾಯಗಳನ್ನು ಹೂಡುವನು. ಇದಕ್ಕೆ ಕೊನೆ ಮೊದಲೆಲ್ಲಿ ಯೋಚಿಸು.