Monday, August 9, 2010

animuttu

ಋಣಕರ್ತಾ ಪಿತಾ ಶತ್ರುಃ ಮಾತಾ ಚ ವ್ಯಭಿಚಾರಿಣೀ|

ಭಾರ್ಯಾ ರೂಪವತೀ ಶತ್ರುಃ ಪುತ್ರಃ ಶತ್ರುರಪ೦ಡಿತಃ||

ತನ್ನ ಮಿತಿಯನ್ನರಿಯದೆ ಸಾಲ ಮಾಡಿ ಅದನ್ನು ತೀರಿಸದೆ ಸತ್ತ ತ೦ದೆಯು ಮಕ್ಕಳಿಗೆ ಶತ್ರು. ವ್ಯಭಿಚಾರಿಣಿಯಾದ ತಾಯಿಯು ಮಕ್ಕಳಿಗೆ ಶತ್ರುವಾಗಿ ಅವರಿ೦ದಲೇ ದೂಷಿಸಲ್ಪಡುತ್ತಾಳೆ.ತು೦ದರಿಯಾದ ಹೆ೦ಡತಿಯು ಗ೦ಡನಿಗೆ ಶತ್ರುವಾಗುವಳು.ಮೊಢ್ನಾದ ಮಗನು ತ೦ದೆ ತಾಯಿಗೆ ಶತ್ರುವಾಗುತ್ತಾನೆ.


Friday, August 6, 2010

animuttu

ಅಜಾತ೦ ನೈವ ಗೃಹ್ಣಾತಿ

ಕುರು ಯತ್ನಮ್ ಅಜನ್ಮನಿ||

ಎಲೈ ಮೂಢನೇ, ನೀನು ಮೃತ್ಯುವಿನಿ೦ದ ಮೃತ್ಯೋರ್ಬಿಭೇಷಿ ಕಿ೦ ಮೊಢ?

ಜಾತ೦ ಮು೦ಚತಿ ಕಿ೦ ಯಮಃ?

ಏಕೆ ಅ೦ಜುತ್ತೀಯೆ? ಹುಟ್ಟಿರುವ ಯಾವುದೇ ಪ್ರಾಣಿಯನ್ನು ಮೃತ್ಯು ಬಿಡುತ್ತಾನೇನು?ಆದರೆ ಹುಟ್ಟದಿರುವವನನ್ನು ಮೃತ್ಯುವು ಮುಟ್ಟುವುದೇ ಇಲ್ಲ. ಆದ್ದರಿ೦ದ ನೀನು ಜನ್ಮಾದಿರಹಿತನಾದ ಆತ್ಮನಾಗಲು ಯತ್ನಿಸು.

animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ಳಿ ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕರೆದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ ಬ್ರಹ್ಮನ , ತಮ್ಮ, ಮನ್ಮಥನ , ತಾಯಿ ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು, ಧರಿಸಿದ ಶಿವನ, ಸತಿ ಪಾರ್ವತಿಯ , ಮಗ ಗಣಪತಿಯಿ೦ದ ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು , ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ಗ೦ಡ ಅರ್ಜುನನ , ತಲೆಗಾಯ್ದ ಕೃಷ್ಣನನ್ನು, ಕರೆದು ತೋರಿಸೆ ರಮಣಿ..



Thursday, August 5, 2010

Animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕ ರೆ ದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ , ಬ್ರಹ್ಮನ ,ತಮ್ಮ ,ಮನ್ಮಥನ , ತಾಯಿ , ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು , ಧರಿಸಿದ ಶಿವನ ,. ಸತಿ ಪಾರ್ವತಿಯ , ಮಗ ಗಣಪತಿಯಿ೦ದ , ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ,ಗ೦ಡ ಅರ್ಜುನನ , . ತಲೆಗಾಯ್ದ ಕೃಷ್ಣನನ್ನು , ಕರೆದು ತೋರಿಸೆ ರಮಣಿ..

ನೋಡಿದಿರಾ, , ಇಲ್ಲಿ ಕವಿಯು ಜನಜೀವನದಲ್ಲಿಃ ಹಾಸುಹೊಕ್ಕಾದ

ವಾವೆಯನ್ನು ತನ್ನ ಕಾವ್ಯದಲ್ಲಿ ಎಷ್ಟು ಚಮತ್ಕಾರವಾಗಿ ಬಳಸಿದ್ದಾನೆ


Wednesday, August 4, 2010

animuttu

ಗೀ"ತಾ ""೦ಗಾ ಚ "ಗಾ" ಯತ್ರೀ "ಗೋ"ವಿ೦ದೇತಿ ಹೃದಿ ಸ್ಥಿತೇ|

ಚತುರ್ಗಕಾರ ಸ೦ಯುಕ್ತೇ ಪುನರ್ಜನ್ಮ ನ ವಿದ್ಯತೇ||

ಗೀತಾ-ದುಃಖ ಸಾಗರದಲ್ಲಿ ಮುಳುಗಿದ ಅರ್ಜುನನಿಗೆ ಆತ್ಮ ಜ್ಞಾನೋಪದೇಶದ ಮೊಲಕ ಶಾ೦ತಿ ಆನ೦ದಗಳನ್ನು ವರ್ಷಿಸಿದ

ಅಮೃತಧಾರೆ ಶ್ರೀ ಕೃಷ್ಣ ಭಗವಾನನ ನೇರವಾದ ಉಪದೇಶಾಮೃತ ಭಗವದ್ಗೀತೆ.

ಗ೦ಗಾ-ಭಗೀರಥನ ತಪಸ್ಸಿಗೆ ಮೆಚ್ಚಿ ಪರಮೇಶ್ವರನ ಜಟೆಯಿ೦ದ ಪವಿತ್ರಳಾಗಿ, ಮಹಾ ವಿಷ್ಣುವಿನ ಪಾದಗಳಿ೦ದ ಶುದ್ಧಳಾಗಿ ನೂರಾರು ಸಹಸ್ರಾರು ತಪಸ್ವಿಗಳಿ೦ದ ನಿತ್ಯವೂ ಸೇವಿಸಲ್ಪಡುತ್ತಿರುವ ಗ೦ಗಾ ನದಿ.

ಗಾಯತ್ರೀ ಮ೦ತ್ರ-ತ್ರೈವರ್ಣಿಕರಿಗೆ ಪ್ರಪ್ರಥಮವಾಗಿ ಜಪ್ಯವಾದ ಶ್ರೇಷ್ಠ ಗಾಯತ್ರೀ ಮ೦ತ್ರ.

ಗೋವಿ೦ದ- ಲೋಕಕಲ್ಯಾಣಕಾರಕ ಗೋವಿ೦ದ

ಈ ನಾಲ್ಕು "" ಕಾರಗಳನ್ನು ಸ್ಮರಿಸುವವನಿಗೆ ಪುನರ್ಜನ್ಮವಿಲ್ಲ.

Tuesday, August 3, 2010

animuttu

ಬಾಹುಭ್ಯಾಮಥ ಜಾನುಭಾ೦ ಶಿರಸಾ ಮನಸಾ ಧಿಯಾ|

ಪ೦ಚಾ೦ಗಕಃ ಪ್ರಣಾಮಃ ಸ್ಯಾತ್ ಸ್ತ್ರೀಣಾ೦ನಮನ ಲಕ್ಷಣ೦||

ಗುರು ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಸ೦ಸ್ಕೃತಿ. ನಾವು ಬಾಗಿ ನಮಸ್ಕರಿಸಿದಾಗ ನಮ್ಮ ಅಹ೦ಕಾರವು ನಾಶವಾಗುತ್ತದೆ.ಹಾಗೂ ಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ, ಗೌರವಗಳು ಉ೦ಟಾಗುತ್ತದೆ.ವೇದ, ಉಪನಿಷತ್, ಇತಿಹಾಸ, ಪುರಾಣ ಮತ್ತು ಧರ್ಮಶಾಸ್ತ್ರಗಳಲ್ಲಿ ನಮಸ್ಕಾರದ ಮಹತ್ವವನ್ನು ಹೀಗೆ ವಿಸ್ತಾರವಾಗಿ ತಿಳಿಸಿದ್ದಾರೆ-

ಉರಸಾ ಶಿರಸಾ ದೃಷ್ಟ್ಯಾ

ಮನಸಾ ವಚಸಾ ತಥಾ|

ಪಾದ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦

ಪ್ರಣಾಮೋsಷ್ಟಾ೦ಗ ಉಚ್ಯತೇ||

ಈ ರೀತಿ ಪುರುಷರು ಮಾಡುವ ಅಷ್ಟಾ೦ಗ ಸಹಿತವಾದ೦ತಹ ನಮಸ್ಕಾರವನ್ನು ಸಾಷ್ಟಾ೦ಗ ನ ಮಸ್ಕಾರವೆನ್ನುತ್ತಾರೆ.ಆದರೆ ಸ್ತ್ರೀಯರಿಗೆ ಇದು ನಿಷಿದ್ಧ.ಸ್ತ್ರೀಯರ ಎದೆ ಮತ್ತು ಸ್ತನಗಳು ಪವಿತ್ರವಾದುವು. ಆದ್ದರಿ೦ದ ಅವನ್ನು ನೆಲಕ್ಕೆ ತಾಗಿಸದೆ, ಮೇಲಿನ ಶ್ಲೋಕದಲ್ಲಿ ತಿಳಿಸಿರುವ೦ತೆ ತಮ್ಮ ಎರಡೂ ಕೈಗಳನ್ನು ಜೋಡಿಸಿ, ಎರಡೂ ಮ೦ಡಿಗಳನ್ನು ಬಾಗಿಸಿ , ತಲೆ ತಗ್ಗಿಸಿ ಶ್ರದ್ಧಾ ಭಕ್ತಿಯಿ೦ದ ಮನಃಪೂರ್ವಕವಾಗಿ ಪ೦ಚಾ೦ಗಕ ನಮಸ್ಕಾರ ಮಾಡಬೇಕು.


Monday, August 2, 2010

ಆಣಿಮುತ್ತು

ಇ೦ದು ನಮ್ಮಲ್ಲಿ ಮಕ್ಕಳಿಗೆ ವಾವೆ ಅ೦ದರೆ ಪರಸ್ಪರ ಸ೦ಬ೦ಧಗಳ ಪರಿಚಯವೇ ಇಲ್ಲ. ಕಾರಣ ಅ೦ಕಲ್ ಆ೦ಟ್ ಬಿಟ್ಟರೆ

ಅವರು ಬೇರೆ ಶಬ್ದಗಳನ್ನೇ ಬಳಸುವುದಿಲ್ಲ. ಹಾಗೆಯೇ ಪ್ರತಿಯೊ೦ದು ಉಚ್ಛಾರಣೆಗೂ ನಮ್ಮಲ್ಲಿ ಪ್ರತ್ಯೇಕ ಅಕ್ಷರಗಳಿವೆ. ಅದನ್ನು ಕನ್ನಡ ಬಲ್ಲ ಯಾರೇ ಓದಿದರೂ ಒ೦ದೇ ರೀತಿ ಓದಬಹುದು. ಆ೦ಗ್ಲ ಭಾಷೆ, ತಮಿಳು, ಹಿ೦ದಿ -ಹೀಗೆ ಯಾವುದೇ ಭಾಷೆಯನ್ನು ತೆಗೆದುಕೊ೦ಡರೂ ಈ ರೀತಿಯ ಸೌಲಭ್ಯ ಕ೦ಡುಬರುವುದಿಲ್ಲ. ಆದರೆ ಸುಖಪುರುಷರಾದ ನಾವು ನಮ್ಮ ಅನುಕೂಲಕ್ಕೆ ಎ೦ಬ ನೆಪದಿ೦ದ ಅನೇಕ ಅಕ್ಷರಗಳನ್ನು ತೆಗೆದು ಹಾಕಿ ಉಚ್ಛಾರಣೆಯಲ್ಲಿ ಗೃಹವು ಗ್ರಹವಾಗಿ ವೃಥಾಎ೦ಬುದು ವ್ರತವಾಗಿದೆ.ಹೀಗೆ ನಮ್ಮ ಅಕ್ಷರಗಳ ಬಡತನವನ್ನು ನಾವೇ ತ೦ದುಕೊಳ್ಳುತ್ತಿದ್ದೇವೆ. ಹಿ೦ದಿನಿ೦ದಲೂ ಅನೂಚಾನವಾಗಿ ಬ೦ದಿರುವ ವೈವಿದ್ಯಪೂರ್ಣವಾದ ಈಗ Iನಮ್ಮ ಸ೦ಬ೦ಧಗಳ ವಿವರವನ್ನು ನಮ್ಮ ಪ್ರಸಿದ್ಧ ಕವಿ ಕುಮಾರವ್ಯಾಸ ಗದುಗಿನ ಭಾರತದ ಈ ಪದ್ಯದಲ್ಲಿ ಗಮನಿಸಿ :

ವೇದ ಪುರುಷನ ಸುತನ ಸುತನ ಸ

ಹೋದರನ ಹೆಮ್ಮಗನ ಮಗನ ತ

ಳೋದರುಯ ಮಾತುಳನ ಮಾವನನತುಳ ಭುಜಬಲದಿ|

ಕಾದಿ ಗೆಲಿದನನಣ್ಣನವ್ವೆಯ

ನಾದಿನಿಯ ಜಠರದಲಿಜನಿಸಿದ

ನಾದಿ ಮೊರುತಿ ಸಲಹೊ ಗದುಗಿನ ವೀರ ನಾರಯಣ||

ವಿಷ್ಣುವಿನ ಮಗನಾದ ನಾರದನ ಸಹೋದರ ಕಶ್ಯಪ ಬ್ರಹ್ಮನ ಹಿರಿಯ ಮಗನಾದ ದೇವೇ೦ದ್ರನ ಮಗ ಅರ್ಜುನನ ತಳೋದರಿ ಸುಭದ್ರೆಯ ಮಾವ ಕ೦ಸನ ಮಾವ ಜರಾಸ೦ಧನನ್ನುಅತುಳ ಭುಜಬಲದಿ೦ದ ಕಾದು ಗೆದ್ದ ಭೀಮಸೇನನ ಅಣ್ಣ ಧರ್ಮರಾಯನ ತಾಯಿ ಕು೦ತಿಯ ನಾದಿನಿ ದೇವಕಿಯ ಜಠರದಲ್ಲಿ ಜನಿಸಿದ ಅನಾದಿ ಮೂರುತಿ ಗದುಗಿನ ನಾರಾಯಣನೇ ನಮ್ಮನ್ನು ಕಾಪಾಡು.

ನೋಡಿದಿರಾ, ನಮ್ಮ ಸ೦ಬ೦ಧಗಳ ವೈವಿಧ್ಯ ಹೇಗಿದೆ.