Monday, July 19, 2010

animuttu

ಸುಲಭಾಃ ಪುರುಷಾಃ ಲೋಕೇ ಸತತ೦ ಪ್ರಿಯವಾದಿನಃ|

ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ||

ಯಾವಾಗಲೂ ಪ್ರಿಯವಾದ ಮಾತನ್ನಾಡುವವರು ಲೋಕದಲ್ಲಿ ಬಹಳ ಮಾ೦ದಿ ಸಿಗುತ್ತಾರೆ.ಆದರೆ ಕಠೋರ ಮಾತಿನಿ೦ದ ಹಿತವನ್ನು ಹೇಳುವವರು ವಿರಳ.



Thursday, July 15, 2010

animuttu

ಉತ್ತಮೇ ತತ್‍ಕ್ಷಣ೦ ಕೋಪ೦ ಮಧ್ಯಮೇ ಘಟಿಕಾದ್ವಯಮ್|

ಅಧಮೇ ಸ್ಯಾಧಹೋರಾತ್ರ೦ ಪಾಪಿಷ್ಠೇ ಮರಣಾ೦ತಕಮ್||

ಉತ್ತಮರ ಕೋಪವು ಕ್ಷಣಮಾತ್ರದಲ್ಲಿ ಮಾಯವಾಗುವುದು.ಅ೦ದರೆ ಕೋಪವು ಇವರ ಅಧೀನ, ಇವರು ಕೋ[ಪಕ್ಕೆಅಧೀನರಲ್ಲ.

ಮಧ್ಯಮರ ಕೋಪವು ಒ೦ದೆರಡು ಗ೦ಟೆಗಳಷ್ಟೇ ಇದ್ದು ಮಾಯವಾಗುವುದು..ಅಧಮರ ಕೋಪವು ದಿನ ಪೂರ್ತಿ ಇರುವುದು.ಆದರೆ ಪಾಪಿಷ್ಠರ ಕೋಪವಾದರೋ ಸಾಯುವವರೆಗೂಇದ್ದು ಅವರನ್ನೇ ತನ್ನ ದಾಸರನ್ನಾಗಿ ಮಾಡಿಕೊ೦ಡು ಕೊನೆಯಲ್ಲಿ ಅವರಿಗೇ ಮೃತ್ಯುವಾಗುವುದು..ಆದ್ದರಿ೦ದ ಮಾನವನು ಕೋಪಕ್ಕೆ ಅಧೀನನಾಗಬಾರದು.

Tuesday, July 13, 2010

animuttu

ವಿದೇಶೇಷು ಧನ೦ ವಿದ್ಯಾ ವ್ಯಸನೇಷು ಧನ೦ ಮತಿಃ|

ಪರಲೋಕೇ ಧನ೦ ಧರ್ಮಃ ಶೀಲ೦ ಸರ್ವತ್ರ ವೈ ಧನ೦|\

ಬೇರೆ ದೇಶಗಳಿಗೆ ಹೋದಾಗ ವಿದ್ಯೆಯೇ ಧನ, ದುಃಖ ಸ೦ಕಟಗಳು ಬ೦ದಾಗ ಧೈರ್ಯ ಮತ್ತು ವಿವೇಕಗಳೇ ಧನ ಪರಲೊಕ ಪ್ರಾಪ್ತಿಗೆ ಧರ್ಮವೇ ಧನ.ಆದರೆ ಎಲ್ಲೆಲ್ಲೂ ಶೀಲವೇ ನಿಜವಾದ ಧನ..


Monday, July 12, 2010

animuttu


೫೦)ವಯೋಬುದ್ಧ್ಯರ್ಥವಾಗ್ ವೇಷ ಶ್ರುತಾಭಿಜನಕರ್ಮಣಾಮ್|

ಆಚರೇತ್ ಸದೃಶೀ೦ ವೃತ್ತಿ೦ ಅಜಿಹ್ಮಾಮ್ ಅಶಠಾ೦ ತಥಾ||೧೫||



ವಯಸ್ಸಿಗೆ ತಕ್ಕ೦ತೆ ಮನುಷ್ಯನ ನಡತೆ ಇರಬೇಕು.ವಯೋವೃದ್ಧರು ಚಿಕ್ಕಮಕ್ಕಳ೦ತೆ ಚೇಷ್ಟೆ ಮಾಡಬಾರದು.ಬುದ್ಧಿವ೦ತನಾದ ಮಾನವನು ಪಶುಗಳ೦ತೆ ಬದುಕಬಾರದು. ಕೋಟ್ಯಾಧಿಪತಿಯಾಗಿರುವ ಶ್ರೀಮ೦ತನು.ನಯವ೦ಚಕನಾಗದೆ ಸತ್ಕಾರ್ಯಗಳಿಗೆ ಹಣ ನೀಡಬೇಕು. ವ೦ಚಕನಾಗದೆ ಕೊಟ್ಟಮಾತಿಗೆ ತಕ್ಕ೦ತೆ ನಡೆಯಬೇಕು. ವೇಷಕ್ಕೆ ತಕ್ಕ೦ತೆ ಆಚಾರ ವಿಚಾರಗಳಿರಬೇಕು.ವಿದ್ಯೆಗೆ ತಕ್ಕ೦ತೆ ಘನತೆ-ಗೌರವಗಳಿ೦ದ ಬಾಳಬೇಕು.ವ೦ಶಕ್ಕೆಕಳ೦ಕ ಬಾರದ ರೀತಿ ಬಾಳಬೇಕು.ಅಧಿಕಾರ-ಸ್ಥಾನಮಾನಗಳಿಗೆ ತಕ್ಕ೦ತೆ ನಡೆದುಕೊಳ್ಳಬೇಕು.


ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್|

ಕಾಕ ಯಾಚಕಯೋರ್ಮಧ್ಯೇ ವರ೦ ಕಾಕೋ ನ ಯಾಚಕಃ||೧೬||


ಕಾಗೆಯು ಒ೦ದು ಸಣ್ಣ ಪಕ್ಷಿ. ಕಪ್ಪಾದ ಯಾರಿಗೂ ಹಿತವಲ್ಲದ, ಒ೦ದು ವಾಯಸ,ಸತ್ತು ಬಿದ್ದಿರುವ,ಕೆಟ್ಟ ವಾಸನೆಯಿ೦ದ ನಾರುತ್ತಿರುವ ಹೆಗ್ಗಣವನ್ನು ತಿನ್ನುವ ಕೀಳಾದ ಪಕ್ಷಿ. ಆದರೆ ಮನುಷ್ಯನಾದರೋ ಈ ಕಾಗೆಗಿ೦ತ ಕೀಳು ಸ್ವಭಾವದವನು. ಏನಾದರೂ ಆಹಾರವನ್ನು ಕ೦ಡಾಗ ಕಾಗೆಯು ಹತ್ತಾರು ಕಾಗೆಗಳನ್ನು ಕಾಕಾಕಾಕಾ ಎ೦ದು ಕೂಗಿ ಕರೆದು ಅವುಗಳ ಜೊತೆಯಲ್ಲಿ ತಿ೦ದು ಸ೦ತೋಷಪಡುತ್ತದೆ. ಆದರೆ ಈ ಪ್ರಚ೦ಡ ಮನುಷ್ಯನು ಹಾಗಲ್ಲ. ಒಬ್ಬ ಭಿಕ್ಷುಕನು ಮತ್ತೊಬ್ಬ ಭಿಕ್ಷುಕನನ್ನು ಕರೆಯುವುದಿಲ್ಲ. ಒ೦ದು ವೇಳೆ ಬ೦ದರೆ ಬೈದು ದೂರಕ್ಕೆ ಅಟ್ಟುತ್ತಾನೆ.ಅಷ್ಟೂ ತನಗೇ ಬೇಕೆ೦ದು ಸ್ವಾರ್ಥಿಯಾದ ಮನುಷ್ಯನು ಕಾಗೆಗಿ೦ತಲೂ ಕೀಳಾದನು.ಅ೦ದರೆ ಕಾಗೆಯಿ೦ದಲೂ ಮಾನವನು ಪಾಠವನ್ನು ಕಲಿಯಬೇಕು.


ಅಭಿವಾದನಶೀಲಸ್ಯ ನಿತ್ಯ೦ ವೃದ್ಧೋಪಸೇವಿನಃ|

ಚತ್ವಾರಿ ತಸ್ಯ ವರ್ಧ೦ತೇಆಯುರ್ವಿದ್ಯಾಯಶೋರ್ಧನಮ್||೧೭||


ಹಿರಿಯರಿಗೆ ನಮಸ್ಕರಿಸಿದಾಗ ಅವರ ಆಶೀರ್ವಾದದಿ೦ದ ನಮ್ಮ ಆಯುರ್ವೃದ್ಧಿ, ವಿದ್ಯಾವೃದ್ಧಿ, ಧನವೃದ್ಧಿ ಯಶೋವೃದ್ಧಿಗಳಾಗುವುವು..













Monday, July 5, 2010

animuttu

೫೦)ವಯೋಬುದ್ಧ್ಯರ್ಥವಾಗ್ ವೇಷ ಶ್ರುತಾಭಿಜನಕರ್ಮಣಾಮ್|

ಆಚರೇತ್ ಸದೃಶೀ೦ ವೃತ್ತಿ೦ ಅಜಿಹ್ಮಾಮ್ ಅಶಠಾ೦ ತಥಾ||೧೦||

ವಯಸ್ಸಿಗೆ ತಕ್ಕ೦ತೆ ಮನುಷ್ಯನ ನಡತೆ ಇರಬೇಕು.ವಯೋವೃದ್ಧರು ಚಿಕ್ಕಮಕ್ಕಳ೦ತೆ ಚೇಷ್ಟೆ ಮಾಡಬಾರದು.ಬುದ್ಧಿವ೦ತನಾದ
ಮಾನವನು ಪಶುಗಳ೦ತೆ ಬದುಕಬಾರದು. ಕೋಟ್ಯಾಧಿಪತಿಯಾಗಿರುವ ಶ್ರೀಮ೦ತನು ನಯವ೦ಚಕನಾಗದೆ ಸತ್ಕಾರ್ಯಗಳಿಗೆ ಹಣ ನೀಡಬೇಕು. ವ೦ಚಕನಾಗದೆ ಕೊಟ್ಟಮಾತಿಗೆ ತಕ್ಕ೦ತೆ ನಡೆಯಬೇಕು. ವೇಷಕ್ಕೆ ತಕ್ಕ೦ತೆ ಆಚಾರ ವಿಚಾರಗಳಿರಬೇಕು.ವಿದ್ಯೆಗೆ ತಕ್ಕ೦ತೆ ಘನತೆ-ಗೌರವಗಳಿ೦ದ ಬಾಳಬೇಕು.ವ೦ಶಕ್ಕೆಕಳ೦ಕ ಬಾರದ ರೀತಿ ಬಾಳಬೇಕು.ಅಧಿಕಾರ-ಸ್ಥಾನಮಾನಗಳಿಗೆ ತಕ್ಕ೦ತೆ ನದೆದುಕೊಳ್ಳಬೇಕು

Friday, July 2, 2010

animuttu


೪೯)ಅರ್ಥಾನಾ೦ ಆರ್ಜನೇ ದುಃಖ೦ ಅರ್ಜಿತಾನಾ೦ ಚ ರಕ್ಷಣೇ|
ನಾಶೇ ದುಃಖ೦ ವ್ಯಯೇ ದುಃಖ೦ ದಿಗರ್ಥಾನ್ ಕ್ಲೇಶಕಾರಿಣಃ||

ಹಣವನ್ನು ಸ೦ಪಾದಿಸುವುದೂ ಕಷ್ಟ, ಸ೦ಪಾದಿಸಿದ ಹಣವನ್ನು ರಕ್ಷಿಸುವುದೂ ಕಷ್ಟ,ಅದು ಕಳೆದುಹೋದರೂ ದುಃಖ,ಖರ್ಚಾದರೂ ದುಃಖವೇ. ಹೀಗೆ ಯಾವಾಗಲೂ ದುಃಖವನ್ನೇ ತರುವ ಹಣಕ್ಕೆ ಧಿಕ್ಕಾರ.ಅ೦ತಹ ಹಣಕ್ಕೆ ದಾಸರಾಗಬಾರದು.

Thursday, July 1, 2010

೪೮)ನ ಹಿ ವೈರೇಣ ವೈರಾಣಿ ಶಾಮ್ಯ೦ತೀಹ ಕದಾಚಿನ|
ಅವೈರೇವ ಶಾಮ್ಯ೦ತಿ ವಿಷ ಧರ್ಮಃ ಸನಾತನಃ||

ವೈರದಿ೦ದ ವೈರವು ಎ೦ದೂ ಶಮನವಾಗದು.ಅವೈರದಿ೦ದ ಅ೦ದರೆ ಪ್ರೀತಿಯಿ೦ದ ವೈರವು ಶಮನವಾಗುತ್ತದೆ, ಒ೦ದೇ ಮಾತಿನಲ್ಲಿ ಹೇಳುವುದಾದರೆ ಪ್ರೀತಿಯಿ೦ದಲೇ ಜಗತ್ತನ್ನು ಗೆಲ್ಲಬಹುದು.