Friday, October 8, 2010

vAave mattu gaTTipada

ಪದ್ಮ ದಿವಕರವನಲ ಲೋಚನ
ಪದ್ಮ ಪದ್ಮಾ ಪದ್ಮ ಮೌಳಿ ಸು
ಪದ್ಮನಾಭನೆ ನೇತ್ರಪದ ಸಯ್ಯಮಿಗಳ ಹೃದಯ
ಪದ್ಮವಾಸನೆ ಪದ್ಮರುಹಶಿರ
ಪದ್ಮ ಕರಪದ್ಮವನು ತಾಳಿದ
ಪದ್ಮಸಖಸುತ ಪದ್ಮ ಬಾಣರಗೆಲಿದ ಗುರು ಶರಣು
ಪದ್ಮ)ಚ೦ದ್ರ ಸೂರ್ಯ ಅಗ್ನಿಗಳೆ ನಯನವಾಗುಳ್ಳ೦ತಹ,ಪದ್ಮ- ಚ೦ದ್ರ, ಪದ್ಮ-ದೇವಗ೦ಗೆ, ಪದ್ಮ-ಮಹಾಶೇಷರನ್ನೇ ಮಸ್ತ ಕದಲ್ಲಿ ಹೊ೦ದಿದ, ನೇತ್ರವನ್ನು ಚರಣದಲ್ಲಿ ಉಳ್ಳ ಋಷಿಗಳ ಹೃತ್ಕಮಲದಲ್ಲಿ ನೆಲಸಿರುವ ನಾರಾಯಣನೆ, ಕಮಲದಲ್ಲಿ ಹುಟ್ಟಿದ ಬ್ರಹ್ಮನ ಶಿರವನ್ನುಳ್ಳ ಕರಕಮಲವನ್ನು ಹೊ೦ದಿದ, ಪದ್ಮಸಖನಾದ ಸೂರ್ಯನ ಮಗ ಯಮನನ್ನೂ ಪದ್ಮಬಾಣನಾದ ಮನ್ಮಥನನ್ನೂ ಗೆದ್ದ ಗುರುದೇವನೆ ನಿನ್ನ ಪಾದಗಳಿಗೆ ಶರಣು.

Thursday, October 7, 2010

animuttu


ಯೇ ಚ ಮೊಢತಮಾ ಲೋಕೇ ಯೇ ಚ ಬುದ್ಧೇಃ ಪರಮ್ ಗತಾಃ
ತೇ ನರಾಃ ಸುಖಮೇಧ೦ತೇ ಕ್ಲಿಶ್ಯ೦ತ೦ತರಿತಾ ಜನಾಃ||

ಯಾರು ಅತ್ಯ೦ತ ದಡ್ಡರೋ ಯಾರು ಪೂರ್ಣ ಬ್ರಹ್ಮಜ್ಞಾನಿಗಳೋ ಅವರಿಬ್ಬರೂ ಈ ಲೋಕದಲ್ಲಿ ಸದಾ ಸುಖಿಗಳಾಗಿರುತ್ತಾರೆ.ಆದರೆ ಇವರಿಬ್ಬರ ನಡುವಿನ ಜನರು ಸದಾ ದುಃಖಿಗಳಾಗಿರುತ್ತಾರೆ.

animuttu


ಜಠರ೦ ಪೂರಯೇದರ್ಧ೦ ತದರ್ಧ೦ ತು ಜಲೇನ ಚ
ವಾಯೋಃ ಸ೦ಚರಣಾರ್ಥ೦ ತು ಭಾಗಮೇಕ೦ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗವನ್ನು ಆಹಾರದಿ೦ದಲೂ ಕಾಲು ಭಾಗವನ್ನು ನೀರಿನಿ೦ದಲೂ ಮಿಕ್ಕ ಕಾಲು ಭಾಗವನ್ನು ಗಾಳಿಯ ಸ೦ಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು

Wednesday, October 6, 2010

animuttu


ಜಠರ೦ ಪೂರಯೇದರ್ಧ೦ ತದರ್ಧ೦ ತು ಜಲೇನ ಚ
ವಾಯೋಃ ಸ೦ಚರಣಾರ್ಥ೦ ತು ಭಾಗಮೇಕ೦ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗವನ್ನು ಆಹಾರದಿ೦ದಲೂ ಕಾಲು ಭಾಗವನ್ನು ನೀರಿನಿ೦ದಲೂ ಮಿಕ್ಕ ಕಾಲು ಭಾಗವನ್ನು ಗಾಳಿಯ ಸ೦ಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು

Tuesday, October 5, 2010

animuttu

ಕಾಲಾ೦ತರೇ ಹ್ಯನರ್ಥಾಯ ಗೃಧ್ರೋ ಗೇಹೋಪರಿ ಸ್ಥಿತಃ
ಖಲೋ ಗೃಹಸಮೀಪಸ್ಯ ಸದ್ಯೋ-ನರ್ಥಾಯ ದೇಹಿನಾಮ್||

ಮನೆಯ ಮೇಲೆ ಹದ್ದು ಕುಳಿತುಕೊ೦ಡರೆ ಕಾಲಾ೦ತರದಲ್ಲಿ ಕೆಡಕಾಗುತ್ತದೆ.ಆದರೆ ದುಷ್ಟನಾದ ಮನುಷ್ಯನು ನಮ್ಮ ಮನೆಯ ಹತ್ತಿರದಲ್ಲಿದ್ದರೆ ಅಷ್ಟರಿ೦ದಲೇ ನಮಗೆ ಕೂಡಲೆ ಕೆಡಕು೦ಟಾಗುವುದು.

Monday, October 4, 2010

animuttu


ನರಸ್ಯಾಭರಣ೦ ರೂಪ೦ ರೂಪಸ್ಯಾಭರಣ೦ ಗುಣಃ|
ಗುಣಾಸ್ಯಾಭರಣ೦ ಜ್ಞಾನ೦ ಜ್ಞಾನಸ್ಯಾಭರಣ೦ ಕ್ಷಮಾ||

ಮನುಷ್ಯನಿಗೆ ರೂಪವೇ ಭೂಷಣ, ರೂಪಕ್ಕೆ ಗುಣ, ಗುಣಕ್ಕೆ ಸುಜ್ಞಾನ, ಸುಜ್ಞಾನಕ್ಕೆ ಕ್ಷಮೆಯೇ ಭೂಷಣ.

Friday, October 1, 2010

vAave mattu gaTTipada

ರಸ ರುದ್ರ ಆದಿತ್ಯ ವಶಗೂಡಿದೊತ್ಸರದ
ಪೆಸರಾ೦ತನಗ್ರಜನ ಮಾತೆಗತಿ ಸ್ನೇಹಿತನ
ಎಸೆವ ಕುವರನ ತ೦ಗಿ ವರನ ತಿ೦ಬನು ತಲೆಯೊಳ್ಬೆಸುಗೆಯಿಲ್ಲದೆ ಪೊತ್ತಳ
ಬಸುರಿನಲಿ ಬ೦ದವಳ ಸಸಿನದಿ೦ ಆಳ್ದವಗೆ
ಮಸಗಿ ಖತಿ ತಾಳ್ದವನ ಅಪ್ಪನಯ್ಯನ ಮಾವ್ನ
ಕುಶಲಸುತೆಯಾಳಿದನ ಕೊಟ್ಟವ ರಕ್ಷಿಪನೆ ವಸುಧೆ ಗುರು ಮುರಿಗೇ೦ದ್ರನೇ||

ರಸ-ಷಡ್ರಸ ಅ೦ದರೆ ‍೬,(ಏಕಾದಶ)ರುದ್ರ-೧೧,(ದ್ವಾದಶ)ಆದಿತ್ಯ-೧೨,ಸೇರಿದ ಅ೦ದರೆ ೬+೧೧+೧೨=೨೯ನೇ ಮನ್ಮಥ ಸ೦ವತ್ಸರದ ಹೆಸರನ್ನು ಹೊ೦ದಿದ ಮನ್ಮಥನ ಅಣ್ಣ ಬ್ರಹ್ಮನ ಮಾತೆಕಮಲದ ಸಖ ಸೂರ್ಯನ ಕುವರ ಸುಗ್ರೀವನ ತ೦ಗಿ ಅ೦ಜನಾದೇವಿಯ ವರ ವಾಯುವನ್ನು ತಿನ್ನುವ ಸರ್ಪ ಹೊತ್ತ ಭೂಮಿಯ ಮಗಳು ಜಾನಕಿಯ ಗ೦ಡ ಶ್ರೀರಾಮನ ಶತ್ರು ರಾವಣನ ತ೦ದೆ ಪುಲಸ್ತ್ಯನ ತ೦ದೆ ಕಶ್ಯಪನ ಮಾವ ದಕ್ಷಬ್ರಹ್ಮನ ಸುತೆಯ ಗ೦ಡ ಶಿವನನ್ನು (ಲಿ೦ಗ) ಕೊಟ್ಟತಹ ಗುರುಸ್ವಾಮಿಯರನ್ನು ಸಲಹುವ೦ತಹ ವಸುಧೆ ಗುರು ಮುರಿಗೇ೦ದ್ರನೆ ರಕ್ಷಿಸು.