Tuesday, March 23, 2010

sukumAra swami

ವಡ್ಡಾರಾಧನೆಯ ಸುಕುಮಾರ ಸ್ವಾಮಿಯಷ್ಟೇ ಸೂಕ್ಷ್ಮನಾದ ಈ ಪುಟಾಣಿ ರಾಯಚೋಟಿ ಸದಸ್ಯನು ಒಮ್ಮೆ ತನ್ನ ಸೋದರತ್ತೆಯ ಮನೆಗೆ ಹೋಗಿದ್ದನು. ಅಲ್ಲಿ ತಟ್ಟೆಯಲ್ಲಿ
ಚಪಾತಿಯ ಜತೆಯಲ್ಲೆ ಗ್ರೇವಿಯನ್ನೂ ಬಡಿಸಿದರು. ಗ್ರೇವಿಗೆ ತಾಗಿದ ಚಪಾತಿಯ ಸ್ವಲ್ಪ ಭಾಗ ನೆನೆದುಹೋಯಿತು. ಅದನ್ನು ಕ೦ಡ ಪುಟಾಣಿ ಬಾಲಕನು ಅಯ್ಯೋ, ಅತ್ತೆ ನನಗೆ ಕೊಳೆತಚಪಾತಿ ಕೊಟ್ಟಿದ್ದಾರೆ -ಎ೦ದು ಅಳತೊಡಗಿದನು.

ಈತನ ಅಮ್ಮನ ಗೆಳತಿಯೊಬ್ಬರು ತಮ್ಮ ಮಗನಿಗೆ ಊಟ ಮಾಡಿಸುವಾಗೆಲ್ಲಾ ಈ ಪುಟಾಣಿ ಹುಡುಗನನ್ನು ತಮ್ಮ ಮನೆಗೆ ಕರೆದೊಯ್ಯುತ್ತಿದ್ದರು.ಆದರೆ ಪ್ರತಿ ಸಲವೂ ಮನೆಗೆ ಹಿ೦ತಿರುಗುತ್ತಾಲೇ ವಾ೦ತಿ ಮಾಡಿಕೊಳ್ಳುತ್ತಿದ್ದನು. ಕಾರಣ ತಿಳಿಯದೆ ಅಮ್ಮನಿಗೂ ಬಹಳ ಆತ೦ಕವಾಯಿತು. ಒಮ್ಮೆ ಅಮ್ಮ ಆತನ ಜತೆಯಲ್ಲಿ ಹೋದಾಗ ಆಕೆ ನೋಡಿದ ದೃಶ್ಯದಿ೦ದ ಆಕೆಯ ಅನುಮಾನ ಪರಿಹಾರವಾಯಿತು.ಮಗುವಿನ ತಾಯಿ ಮಗುವಿಗೆ ಅನ್ನಕ್ಕೆ ಸಾರು ಹಾಕುವ ಮುನ್ನ ಚೆನ್ನಾಗಿ ಕಿವುಚುತ್ತಿದ್ದರು. ಅದನ್ನು ನೋಡಿ ಅಸಹ್ಯಪಟ್ಟುಕೊ೦ಡು ನಮ್ಮ ಸುಕುಮಾರಸ್ವಾಮಿ ಮನೆಗೆ ಬರುತ್ತಲೇ ಲೊಳಕ್ ಎನ್ನುತ್ತಿದ್ದನು.

’ಸುಕುಮಾರದಲ್ಲಿರುವ ಕು ರ ತೆಗೆದರೆ ಈ ಪುಟಾಣಿಯ ತಾಯಿಯ ಹೆಸರು ಸಿಗುವುದು. ಈಗ ಬಟಾಣಿಯಾಗಿರುವ ಈ ಪುಟಾಣಿ ಯಾರೆ೦ಬುದು ನಿಮಗೆ ತಿಳಿದಿರಬೇಕಲ್ಲಾ?

1 comment:

Note: Only a member of this blog may post a comment.