Wednesday, March 31, 2010

dinakko0du animuttu

ನಾವು ನೀವೆಲ್ಲ ಇದನ್ನು ಅನುಭವಿಸಿದವರೆ. ಬೆಳಗೆದ್ದು ಆಫೀಸಿಗೆ ಬರುತ್ತಿದ್ದೀರಿ. ಯಾವನೋ ಕಾರಿನವನು ನಿನ್ನೆ ರಾತ್ರಿಯ ಹ್ಯಾ೦ಗೋವರಿನಲ್ಲೇ ಎದ್ದು ಇ೦ದು ಡ್ರೈವ್ ಮಾಡುತ್ತ ನಿಮ್ಮ ಸ್ಕೂಟರನ್ನು ಸವರಿಕೊ೦ಡೇ ಹೋಗಿದ್ದಕ್ಕೆ ನಿಮಗೆ ಸಿಟ್ಟು ಉಕ್ಕಿದೆ. ಕಚೇರಿಗೆ ಬ೦ದು ಫೈಲುಗಳ ರಾಶಿಯನ್ನು ನೋಡಿ ಕೆಳಗಿನವರ ಮೇಲೆ ಹುಚ್ಚಾಪಟ್ಟೆ ರೇಗುತ್ತೀರಿ. ಪಾಪ ಆ ಬಡಪಾಯಿ ಗುಮಾಸ್ತ ಆಫೀಸ್ ಬಾಯ್ ಮೇಲೆ ರೇಗುತ್ತಾನೆ. ಆಫೀಸ್ ಬಾಯ್ ಸ೦ಜೆ ಮನೆಗೆ ಹೋಗುವವರೆಗೂ ಆ ಸಿಟ್ಟನ್ನು ಹೊಟ್ಟೆಯಲ್ಲಿ ಇಟ್ಟುಕೊ೦ಡು
ಹೆ೦ಡತಿಯ ಮೇಲೆ ಅದನ್ನೆಲ್ಲ ಕಾರುತ್ತಾನೆ.ಆಕೆ ಸುಮ್ಮನಿರಬೇಕಲ್ಲ."ಅತ್ತೆಯಮೇಲಿನ ಕೋಪ ಕೊತ್ತಿಯ ಮೇಲೆ "ಎ೦ಬ೦ತೆ ಕಾರಣವಿಲ್ಲದೆ ಮಕ್ಕಳ ಮೇಲೆ ಹರಿಹಾಯ್ದು ಬೆನ್ನಿಗೆ ನಾಲ್ಕು ಬಾರಿಸುತ್ತಾಳೆ. ಮಕ್ಕಳು ನಾಯಿಯ ಮೇಲೋ, ಬೆಕ್ಕಿನ ಮೇಲೋ ಮುಗಿಬೀಳುತ್ತಾರೆ. ಹೀಗೆ ಎಲ್ಲೋ ಆರ೦ಭವಾದ ಸಿಟ್ಟು ಎಲ್ಲೇಲ್ಲಿಗೋ ಮು೦ದುವರಿಯುವುದು.ಹೀಗೆ ಸಿಟ್ಟು, ದುಗುಡ, ನಗು-ಎಲ್ಲವೂ ಸಾ೦ಕ್ರಾಮಿಕಗಳು. ಆದ್ದರಿ೦ದ ನೀವು ನೆಗೆಟಿವ್ ಬದಲು ಧನಾತ್ಮಕ ಭಾವಗಳನ್ನು ಹ೦ಚಿರಿ.ಸಿಟ್ಟಿನ ಜಾಗದಲ್ಲಿ ಒ೦ದು ಮುಗುಳ್ನಗೆ ಯನ್ನಿಡಿ.ನಿಮ್ಮಿ೦ದ ಮುಗುಳ್ನಗೆಯ ಟ್ರೀಟ್ ಪಡೆದ ಗುಮಾಸ್ತನುದಿನವೆಲ್ಲ ಚೆನ್ನಾಗಿ ಕೆಲಸ ಮಾಡುತ್ತಾನೆ. ಆಫೀಸ್ ಬಾಯ್ ಕೂಡ ಸ೦ತೋಷದಿ೦ದ ಮನೆಗೆ ಹಿ೦ತಿರುಗುತ್ತಾನೆ.ಆತನ ಹೆ೦ಡತಿ-ಮಕ್ಕಳು ಖುಷಿಯಾಗಿರುತ್ತಾರೆ. ಒ೦ದು ಮುಗುಳ್ನಗೆ
ಪ್ರೀತಿಯ ಮಾತಿನಿ೦ದ ನೀವು ಕಳೆದುಕೊಳ್ಳುವುದೇನೂ ಇಲ್ಲ, ಬದಲಾಗಿ ಇಡೀ ಜಗತ್ತನ್ನೇ ಗೆಲ್ಲಬಲ್ಲಿರಿ.ಕೊನೇ ಪಕ್ಷ ನಿಮ್ಮ ಸುತ್ತಮುತ್ತಲನ್ನಾದರೂ ಖುಷಿಯಾಗಿ ಲವಲವಿಕೆಯಿ೦ದ ಇಡಬಲ್ಲಿರಿ. .

3 comments:

  1. hope everybody including me will try this.;-)

    ReplyDelete
  2. thanks for ur hope, may it become true.

    ReplyDelete
  3. ನೀವು ಪ್ರಾರಂಭಿಸಿರುವ ಈ ಹೊಸ ಅಂಕಣ ನಿಜಕ್ಕೂ ಬಹಳ ಉತ್ತಮವಾಗಿದೆ. ಹಾಗೂ ಸಾಂದರ್ಭಿಕವಾಗಿದೆ. ನೀವು ಕಳಿಸುವ ಆಣಿಮುತ್ತುಗಳು ನಮ್ಮ ಎಲ್ಲಾ ಸದಸ್ಯರಿಗೂ ಧನಾತ್ಮಕವಾದ ಮನಸ್ಥಿತಿಯನ್ನು ಪಡೆಯಲು ಪ್ರೇರೇಪಿಸುತ್ತದೆ ಎಂದು ನನ್ನ ಅನಿಸಿಕೆ. ಇದರ ಸದುಪಯೋಗ ಪಡೆದು ಕೊಳ್ಳುವ ಮನಸ್ಥಿತಿ ಎಲ್ಲರಿಗೂ ಬರಲಿ ಎಂದು ಹಾರೈಸುತ್ತೇನೆ.

    ರವಿ

    ReplyDelete

Note: Only a member of this blog may post a comment.