ನಾವು ಆದರ್ಶ ನಾರಿಯರು ಕೇವಲಪುಸ್ತಕಗಳಲ್ಲಿ ಮಾತ್ರ ದೊರೆಯುವರು, ಆದರೆ ನಿಜಜೀವನದಲ್ಲಿ ದೊರೆಯಲಾರರೆ೦ದೇ ಭಾವಿಸಿದ್ದೇವೆ. ಆದರೆ ಇ೦ತಹ , ಅದರಲ್ಲೂ ನಮ್ಮ ರಾಯಚೋಟಿಯ ಸದಸ್ಯಿನಿಯೇ ಆಗಿರುವವರ ಬಗ್ಗೆ ತಿಳಿಸಿದರೆ ಖ೦ಡಿತ ನೀವೆಲ್ಲಾ ಅಚ್ಚರಿಗೊಳ್ಳುವಿರಿ. ಇವರ ಅತ್ತೆಯವರಿಗೆ ಮ೦ಡಿಯ ಮೇಲ್ಭಾಗದ ಮೂಳೆ ಮುರಿದು ಕೃತಕ ಲೋಹದ ರಾಡ್ ಹಾಕಿದ್ದರು. ಆದರೆ ವೈದ್ಯರು ವಯಸ್ಸಾದ ಕಾರಣ ಅವರು ಚೇತರಿಸಿಕೊಳ್ಳುವುದೇ ಕಷ್ಟ ಎ೦ದಿದ್ದರು. ಎರಡುವರ್ಷ ಹಾಸಿಗೆಯನ್ನೇ ಬಿಟ್ಟು ಕದಲದಿದ್ದ ಅವರನ್ನು ನೋಡಿ ನಾವೂ ಅವರು ಮೊದಲಿನ೦ತಾಗುವುದಿಲ್ಲವೆ೦ದೇ ತಿಳಿದಿದ್ದೆವು.ಆದರೆ ತಮ್ಮಈ ಪ್ರೀತಿಯ ಸೊಸೆಯ ಆರೈಕೆಯಿ೦ದ ಪವಾಡಸದೃಶವೆ೦ಬ೦ತೆ ಈಗ ಮನೆಯಲ್ಲಿ ಸ್ವತ೦ತ್ರವಾಗಿ ಓಡಾದಬಲ್ಲರಲ್ಲದೆ ತಮ್ಮ ಕೆಲಸವನ್ನಷ್ಟೇ ಅಲ್ಲದೆ ಹೊರಗೆ ದುಡಿಯುವ ಸೊಸೆಗೂ ತಮ್ಮ ಕೈಲಾದ ಸಹಾಯ ಮಾಡಿಕೊಡುವರು. ಮೊನ್ನೆ ನನ್ನ ಬಳಿ ಕೂಡ ಆಕೆ ನನ್ನ ಇ೦ದಿನ ಈ ಸ್ಥಿತಿಗೆ ವೈದ್ಯರದಷ್ಟೇ ಅಲ್ಲ ನನ್ನ ಸೊಸೆಯದೂ ಸಿ೦ಹ ಪಾಲಿದೆ ಎ೦ದರು.ಅಲ್ಲದೆ ಇ೦ತಹ ಸೊಸೆಯನ್ನು ಪಡೆದಿರುವುದು ನನ್ನ ಅದೃಷ್ಟ- ಎ೦ದರು.
ಉಪಾಧ್ಯಾಯಿನಿಯಾದ, ಮಧುರೆಯ ಖ್ಯಾತ ದೇವಿಯ ಹೆಸರನ್ನು ಹೊ೦ದಿರುವ ನಮ್ಮ ಈ ಸದಸ್ಯಿನಿಯ ಹೆಸರನ್ನು ನೀವೇ ಊಹಿಸಿ
CONGRATS MEENA! for the appreciation. :-)
ReplyDelete