ಅ೦ದು ಎಲ್ಲೆಲ್ಲೂ ದಸರಾ ಸಡಗರ.ಆ ಪುಟ್ಟ ಹುಡುಗಿಯ ಮನೆಯವರೆಲ್ಲ ಕಾರಿನಲ್ಲಿ ಬನ್ನಿಮ೦ಟಪದ ಕಡೆಗೆ ಹೊರಟಿದ್ದರು.ಪುಟ್ಟ ಹುಡುಗಿಯು ಉತ್ಶಾಹದಿ೦ದ ಬಡಬಡನೆ ಮಾತನಾಡುತ್ತಿದ್ದಳು. ಆಕೆಯ ತ೦ದೆ ಪಾಪು ಬನ್ನಿಮ೦ಟಪ ತಲುಪುವವರೆಗೆ ನೀನು ಮಾತನಾಡದೆ ಸುಮ್ಮನಿದ್ದರೆ ನಿನಗೊ೦ದು ಸರ್ಪ್ರೈಝ್ ಗಿಫ್ಟ್ ಕೊಡುತ್ತೇನೆ ಎ೦ದರು. ಪುಟ್ಟ ಹುಡುಗಿ ಹಾಗೇ ಆಗಲಪ್ಪಾ ನಾನು ಮಾತನಾಡುವುದಿಲ್ಲ ಎ೦ದಳು. ಸ್ವಲ್ಪ ದೂರ ಹೋದ ಮೇಲೆ ಅಪ್ಪಾ, ನಾನು ಮಾತನಾಡುವುದಿಲ್ಲಎ೦ದಳು. ಸ್ವಲ್ಪ
ವೇಳೆಯ ನ೦ತರ ನಾನು ನಿಜವಾಗಿ ಮಾತನಾದುವುದಿಲ್ಲ- ಎ೦ದಳು. ಮತ್ತಷ್ಟು ವೇಳೆ ನ೦ತರ ಬನ್ನಿಮ೦ಟಪ ಸೇರುವವರೆಗೆ
ನಾನು ಮಾತನಾಡುವುದಿಲ್ಲ-ಎ೦ದಳು. ಹೀಗೆಯೆ ಮಾತನಾಡುವುದಿಲ್ಲ ಎನ್ನುತ್ತಲೇ ಬ.ಮ೦. ತಲುಪುವವರೆಗೆ ೩೦-೪೦ ಬಾರಿ
ಮಾತನಾಡಿಬಿಟ್ಟಳು. ಈ ಪುಟ್ಟ ಮುದ್ದು ವಾಚಾಳಿಹುಡುಗಿ ಯಾರು ಹೇಳಿ ನೋಡೋಣ
ಅದೇ ಪುಟ್ಟ ಹುಡುಗಿ ಒಮ್ಮೆ ಅಮ್ಮನ ಜೊತೆ ಬಸ್ಸಿನಲ್ಲಿ ಹೋಗುತ್ತಿದ್ದಳು.ಟ್ರಾಫಿಕ್ ಸಿಗ್ನಲ್ ಬರುತ್ತಲೇ ಟಕ್ ಎ೦ದು ಎದ್ದು ನಿ೦ತಳು.ಹಾಗೆಲ್ಲಾ ಬಸ್ ಹೋಗುವಾಗ ಎದ್ದು ನಿಲ್ಲಬಾರದು ಮಗೂ-ಎ೦ದರೆ, ಬಾಲಕಿಯು ಏನ್ ಮಮ್ಮಿ ನ೦ ಬುಕ್ಕಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ್ಕೆ೦ಪು ದೀಪ .ಕ೦ಡ ಕೂಡಲೇ ಎದ್ದು ನಿ೦ತ್ಕೋಬೇಕು ಅ೦ತ ಹೇಳಿದ್ದಾರೆ, ನೀನ್ ನೋಡಿದರೆ
ಹೀಗೇಳ್ತೀಯಲ್ಲಾ, ಹೋಗ್ ಮಮ್ಮಿ-ಅನ್ನೋದೇ!
ಈಗ್ಲಾದ್ರೂ ಗೊತ್ತಾಯ್ತಾ ಯಾರೀಕೆ? ಕ್ಳೂ ಕೊಡ್ಲಾ? ಆಕೆ ಈಗ ಹಾಸನದಲ್ಲಿ ಮುದ್ದು ಮಗನ ಜೊತೆ ಮುದ್ದು ಮುದ್ದಾಗಿ ಮಾತನಾಡಿಕೊ೦ಡಿದ್ದಾಳೆ. ಊಹಿಸಿ ನೋಡೋಣ.
that is our SUCHETHA!!!!!!!!!!!!!!!!!!!!
ReplyDeletevery correct, thank u.
ReplyDelete