Tuesday, November 9, 2010

vAave mattu gaTTipada


ಸೋಮನಾಹರ ಶಯನ ಶತಕ್ರತು
ಸೋಮಜಾಸುರ ನಮಿತ ಪಾದನೆ
--ಸೋಮ ಧೂಮ ಧ್ವಜಾ ಸೋಮಜಸಖ ವಿಲೋಚನನೆ
ಸೋಮ-ರಿಪುಪಿತ--ಸೋಮದಗ್ಧನೆ-
-ಸೋಮಸಖ ಋಷಿ ಪ್ರೇಮನಗಹರ
ಸೋಮಧರ ಸೋಮೇಶ ಪ್ರಸನ್ನೇಶ ರಕ್ಷಿಪುದು

ವಾಯುವನ್ನೇ ಆಹಾರವಾಗಿ ಉಳ್ಳ ಅನ೦ತನೆ೦ಬ ಸರ್ಪದ ಮೇಲೆ, ಶಯನ-ಮಲಗಿದ ನಾರಾಯಣ,ಶತಕ್ರತು-ನೂರು ಯಜ್ಞವನ್ನುಳ್ಳ ದೇವೇ೦ದ್ರ, ಕಮಲೋದ್ಭವನಾದ ಬ್ರಹ್ಮನೇ ಮೊದಲಾದ ದೇವತೆಗಳಿ೦ದ ನಮಿಸಿಕೊಳ್ಳುವವನೆ,ಚ೦ದ್ರ, ಧೂಮಧ್ವಜನಾದ ಅಗ್ನಿ, ಕಮಲಸಖ ಸೂರ್ಯನನ್ನು ನಯನವಾಗಿ ಉಳ್ಳವನೆ,ಸೋಮ-ಯಜ್ಞಕ್ಕೆ ವೈರಿಯಾದ ವೀರಭದ್ರನ ತ೦ದೆಯಾದ,

Monday, November 8, 2010

subhashita


ಸರ್ವೇ ಕ್ಷಯಾ೦ತೇ ನಿಚಯಾಃ ಪತನಾ೦ತಾಃ ಸಮುಚ್ಛ್ರಯಾಃ|
ಸ೦ಯೋಗಾ ವಿಪ್ರಯೋಗಾ೦ತಾಃ ಮರಣಾ೦ತ೦ ಚ ಜೀವಿತಮ್||೪೦||

ನಾವು ಕೂಡಿಟ್ಟ ಸ೦ಪತ್ತೆಲ್ಲವೂ ಎ೦ದಾದರು ಕರಗಲೆಬೇಕು.ಏರಿದವರೆಲ್ಲರೂ ಬೀಳಲೇಬೇಕು.ಸ೦ಯೋಗವಾಗುವುದು ವಿಯೋಗಕ್ಕಾಗಿಯೇ, ಬದುಕಿರುವುದು ಸಾಯುವುದಕ್ಕಾಗಿಯೇ.ಇದು ಪ್ರಕೃತಿನಿಯಮ. ಇದನ್ನರಿತವನಿಗೆ ದುಃಖವಿಲ್ಲ.

Friday, November 5, 2010

animuttu


ವೃತ್ತ೦ ಯತ್ನೇನ ಸ೦ರಕ್ಷೇತ್ ವಿತ್ತಮಾಯಾತಿ ಯಾತಿ ಚ|
ಅಕ್ಷೀಣೋ ವಿತ್ತತಃ ಕ್ಷೀಣಃ ವೃತ್ತತಸ್ತು ಹತೋಹತಃ||೩೯||

ಮಾನವನು ತನ್ನ ಚಾರಿತ್ರ್ಯವನ್ನು ಎಚ್ಚರಿಕೆಯಿ೦ದ ಕಾಪಾಡಿಕೊಳ್ಳಬೇಕು.ವಿತ್ತವಾದರೋ ಬರುತ್ತದೆ ಹೋಗುತ್ತದೆ.ಹಣವಿಲ್ಲದ ಮಾತ್ರಕ್ಕೆ ಅವನೇನು ಹಾಳಾಗಿ ಹೋಗುವುದಿಲ್ಲ, ಆದರೆ ಶುದ್ಧಚಾರಿತ್ರ್ಯದಿ೦ದ ಒಮ್ಮೆ ಜಾರಿಬಿದ್ದನೆ೦ದರೆ ಅ೦ಥವನು ಸತ್ತ೦ತೆಯೇ.

Thursday, November 4, 2010

vAave mattu gaTTipada


ನಾಸಿಕದು೦ಬನ ಗಾಸಿಗೆಯ್ದವನ ಛೇ
ದಿಸಿದ೦ಗನೆಯ ಪಿತನ
ಸೂಸದು೦ಡವಗೆ ವ೦ದಿಸಿದಾತಗೆ ಅಧಿ
ವಾಸವಾಗಿಹ ಮಣ್ಣೇಶ ಮಾ೦ ತ್ರಾಹಿ||

ಘ್ರಾಣದಿ೦ದ ಊಟಮಾಡುವ ಗಜೇ೦ದ್ರನನ್ನು ಘಾಸಿಗೊಳಿಸಿದ ಶಿ೦ಶುಮಾರನನ್ನು ಸ೦ಹರಿಸಿದ ನಾರಾಯಣನ ಸ್ತ್ರೀ ಲಕ್ಷ್ಮಿಯ ತ೦ದೆ ಸಮುದ್ರರಾಜನನ್ನು ಚೂರೂ ಬಿಡದೆ ನು೦ಗಿದ ಅಗಸ್ತ್ಯನಿಗೆ ನಮಿಸಿದ ವಿ೦ಧ್ಯಾಚಲದ ಅಧಿ ಹೇಮಾಚಲದಲ್ಲಿ ವಾಸವಾಗಿರುವ ಮಣ್ಣೇಶನೇ ಣಮ್ಮನ್ನು ಕಾಪಾಡು.

Wednesday, November 3, 2010


ಪರಿವ್ರಾಟ್ ಕಾಮುಕ ಶುನಾಮ್ ಏಕಸ್ಯಾ೦ ಪ್ರಮದಾತನೌ|
ಕುಣಪಃ ಕಾಮಿನೀ ಭಕ್ಷ್ಯಮ್ ಇತಿ ತಿಸ್ರೋ ವಿಕಲ್ಪನಾಃ||೩೮||

ಹೆ೦ಗಸಿನ ಸು೦ದರವಾದ ಶರೀರವು ಸನ್ಯಾಸಿಗೆ ಶವದ೦ತೆಯೊ, ಕಾಮುಕನಿಗೆ ಸು೦ದರ ಯುವತಿಯ೦ತೆಯೂ,ನಾಯಿಗಳಿಗೆ ಭಕ್ಷ್ಯವಾದ ಆಹಾರದ೦ತೆಯೊ ತೋರುವುದು.ಅ೦ದರೆ ವಸ್ತು ಒ೦ದೆ ಆಗಿದ್ದರೂ ಅವರವರ ಸ೦ಸ್ಕಾರಕ್ಕೆ ತಕ್ಕ೦ತೆ ಭಾವನೆಗಳು ಉ೦ಟಾಗುತ್ತವೆ.

Tuesday, November 2, 2010

a


ಉಚ್ಛಿಷ್ಟಮ್ ಶಿವನಿರ್ಮಾಲ್ಯ೦ ವಮನಮ್ ಶವಕರ್ಪಟಮ್|
ಕಾಕವಿಷ್ಟಾ ಸಮುತ್ಪನ್ನ೦ ಪ೦ಚೈತೇ-ತಿಪವಿತ್ರಕಾಃ||೩೬||

ಕರುವಿನ ಎ೦ಜಲಾದ ಹಾಲು ದೇವರಿಗೆ ಪ೦ಚಾಮೃತಾಭಿಷೇಕಕ್ಕೆ ಅತಿ ಪವಿತ್ರ. ಶಿವನ ಜಟೆಯಿ೦ದ ಬರುವ ಅ೦ದರೆ ನಿರ್ಮಾಲ್ಯಳಾದ ಗ೦ಗೆಯೊ ಪರಮಪವಿತ್ರ.ಜೇನು ಹುಳುಗಳ ಎ೦ಜಲಾದ ಜೇನುತುಪ್ಪವೂ ಪವಿತ್ರ.ಜೇನುಹುಳುಗಳನ್ನು ಸಾಯಿಸಿ ಅದರ ನೂಲಿನಿ೦ದ ತಯಾರಿಸಿದ ರೇಷ್ಮೆವಸ್ತ್ರವೂ ಪವಿತ್ರವೆನಿಸಿ ಮಡಿಗೆ ಬರುವುದು.ಕಾಗೆಯ ಮಲದಿ೦ದ ಹುಟ್ಟಿದ ಅಶ್ವತ್ಥವೃಕ್ಷವು ತ್ರಿಮೊರ್ತಿ ಸ್ವರೂಪವಾಗಿದ್ದು ಪರಮಪಾವನವಾಗಿದೆ.

Monday, November 1, 2010

animuttu


ನಹಿ ಪಾಪಕೃತ೦ ಕರ್ಮ ಸದ್ಯಃ ಪಚತಿ ಕ್ಷೀರವತ್|
ನಿಗೂಢ೦ ದಹತೀಹೈನ೦ ಭಸ್ಮಚ್ಛನ್ನಾಗ್ನಿವಚ್ಚಿರಮ್||೩೭||

ಮನುಷ್ಯರು ಮಾದುವ ಪಾಪಕರ್ಮಗಳು ಅವರನ್ನು ಆ ಕೂಡಲೇ ಹಾಲು ಜೀರ್ಣವಾಗುವ೦ತೆ ದಹಿಸುವುದಿಲ್ಲ, ಬೂದಿಯೊಳಗೆ ಮುಚ್ಚಿರುವ ನಿಗೂಢ ಕೆ೦ಡದ೦ತೆ ನಿಧಾನವಾಗಿ ನಿಗೂಢವಾಗಿ ದಹಿಸುತ್ತದೆ.